ಬೆಂಗಳೂರು : ಬಿಜೆಪಿಯವರಿಗೆ ಕಿತಾಪತಿ ಮಾಡದೆ ಇದ್ರೆ ನಿದ್ರೆಯೇ ಬರೋದಿಲ್ಲ, ನಾಲ್ಕು ವರ್ಷ ಅಧಿಕಾರದಲ್ಲಿದ್ರು, ಅವರಿಗೆ ಅಧಿಕಾರ ನಡೆಸೋ ಯೋಗ್ಯತೆ ಇಲ್ಲ ಜನರೇ ಅವರನ್ನ ತಿರಸ್ಕಾರ ಮಾಡಿದ್ದಾರೆಂದು ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ದ ವಾಗ್ದಾಳಿಯನ್ನ ನಡೆಸಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದ ಸರ್ಕಾರಿ ಶಾಲೆಗೆ ಭೇಟಿ ನೀಡಿ ವಿಧ್ಯಾರ್ಥಿಗಳಿಗೆ ಪರಿಕರಗಳನ್ನ ವಿತರಣೆ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಯೋತ್ಪಾದಕರನ್ನ ಬೆಳೆಸುವ ಕೆಲಸ ಮಾಡುವುದು ಬಿಜೆಪಿಯವರು, ಕಾಂಗ್ರೆಸ್ ಪಕ್ಷ ಯಾವತ್ತು ಸಹ ಮಾಡುವುದಿಲ್ಲ. ಭಯೋತ್ಪಾದಕರಿಗೆ ಬಿಜೆಪಿಯವರು ಕುಮ್ಮಕ್ಕು ನೀಡುತ್ತಿದ್ದಾರೆ. ಉಡುಪಿಯಲ್ಲಿ ವಿಡಿಯೋ ಚಿತ್ರೀಕರಣ ವಿವಾದ ಸಂಬಂಧ ಪಟ್ಟಂತೆ ಬಿಜೆಪಿ ಪಕ್ಷದಿಂದ ಆಯೋಗದ ಸದಸ್ಯೆ ಖುಷ್ಬೂ ರವರು ಭೇಟಿ ನೀಡಿ ಅಲ್ಲಿ ಯಾವುದೇ ಕ್ಯಾಮಾರ ಇರಲಿಲ್ಲ ಇದನ್ನ ರಾಜಕೀಯವಾಗಿ ಬಳಸಿಕೊಳ್ಳಬೇಡಿ ಅಂತ ಹೇಳಿದ್ದಾರೆ. ಆದ್ರೆ ಬಿಜೆಪಿಯವರಿಗೆ ಕಿತಾಪತಿ ಮಾಡದೆ ಇದ್ರೆ ನಿದ್ರೆಯೇ ಬರೋದಿಲ್ಲ ಎಂದು ಬಿಜೆಪಿಯವರ ವಿರುದ್ದ ಹರಿಹಾಯ್ದಿದ್ದಾರೆ.
![Demo](https://prajatvkannada.com/wp-content/uploads/2023/08/new-Aston-Band.jpeg)