ಮೈಸೂರು: ಮೈಸೂರು ಜಿಲ್ಲೆಯಲ್ಲಿ(Mysuru Crime) ಜೋಡಿ ಕೊಲೆ ನಡೆದಿದ್ದು, ಸಾಮಿಲ್ ನಲ್ಲಿ ಇದ್ದ ಇಬ್ಬರು ಕಾವಲುಗಾರರನ್ನು ಹತ್ಯೆ ಮಾಡಲಾಗಿದೆ. ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ವೆಂಕಟೇಶ್ ಹಾಗೂ ಶಣ್ಮುಗ ಎಂಬುವರನ್ನ ಕೊಲೆ ಮಾಡಲಾಗಿದೆ. ಪಟ್ಟಣದ ಎಸ್.ಎಸ್.ಸಾಮಿಲ್ ನಲ್ಲಿ ಘಟನೆ ನಡೆದಿದ್ದು, ಪ್ರತಿದಿನ ಮುಂಜಾನೆ 6 ಗಂಟೆಗೆ ವೆಂಕಟೇಶ್ ಸಾಮಿಲ್ ನಿಂದ ಹೊರಗೆ ಬರುತ್ತಿದ್ದರು.ಇಂದು 7 ಗಂಟೆ ಆದ್ರೂ ಹೊರಗೆ ಬಂದಿರಲಿಲ್ಲ.
ಇದರಿಂದ ಅನುಮಾನಗೊಂಡ ನೆರೆ ಮನೆಯವರು ಮಾಲೀಕರಿಗೆ ವಿಚಾರ ಮುಟ್ಟಿಸಿದ್ದಾರೆ.ಮಾಲೀಕರು ಸ್ಥಳಕ್ಕೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.ಮೃತ ಷಣ್ಮುಗ ಮಾನಸಿಕ ಅಸ್ವಸ್ಥನಾಗಿದ್ದನೆಂದು ಹೇಳಲಾಗಿದೆ.ಸಾಮಿಲ್ ನಲ್ಲಿ ಸಿಗುವ ಸೌದೆಗಳನ್ನ ಮಾರಿಕೊಂಡು ಜೀವನ ನಡೆಸುತ್ತಿದ್ದ ಎಂದು ಹೇಳಲಾಗಿದೆ.ಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಅಮಾಯಕರನ್ನ ಹತ್ಯೆ ಮಾಡಿದ ದುಷ್ಕರ್ಮಿಗಳ ಸಂಚು ಏನು ಎಂದು ತಿಳಿದು ಬಂದಿಲ್ಲ.ಸ್ಥಳಕ್ಕೆ ಅಡಿಷನಲ್ ಎಸ್ಪಿ ನಂದಿನಿ ರವರು ಹಾಗೂ ಡಿವೈಎಸ್ಪಿ ಭೇಟಿ ನೀಢಿದ್ದಾರೆ.