ಕಲಬುರಗಿ: ಅಕ್ಕಿ ವಿಚಾರದಲ್ಲಿ ರಾಜಕಾರಣ ಮಾಡುವ ಉದ್ದೇಶ ಕೇಂದ್ರಕ್ಕೆ ಇಲ್ಲ ಎಂದು ಕಲಬುರಗಿಯಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಹೇಳಿದರು. ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆಗಿಲ್ಲ, ಹಿಂದೆಯೂ ಆಗಿದ್ದರು. ಈ ಹಿಂದೆ ಆಗದಿದ್ದ ಸಮಸ್ಯೆ ಈಗ ಯಾಕೆ ಆಗುತ್ತಿದೆ. ಕೇಂದ್ರ ಅಕ್ಕಿ ಕೊಟ್ಟಾಗ ಸಿದ್ದರಾಮಯ್ಯ ತಮ್ಮ ಫೋಟೋ ಹಾಕಿದ್ರು. ಸಿದ್ದರಾಮಯ್ಯ ಕೇಂದ್ರದ್ದು ಸೇರಿ 10 ಕೆಜಿ ಕೊಡ್ತೇವೆ ಅಂತಾ ಹೇಳಿಲ್ಲ. ತಲಾ 10 ಕೆಜಿ ಅಕ್ಕಿ ಕೊಡಬೇಕೆಂದು ಸರ್ಕಾರಕ್ಕೆ ಆಗ್ರಹ ಮಾಡ್ತೇವೆ ಎಂದರು.
ನಿನ್ನೆ ಸಿಎಂ ಸಿದ್ದರಾಮಯ್ಯ ಅಮಿತ್ ಶಾರನ್ನು ಭೇಟಿ ಮಾಡಿ ಬಂದಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದು ಯಾರು ಎಂದು ಕಲಬುರಗಿಯಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಪ್ರಶ್ನಿಸಿದರು. ಭಾಗ್ಯಗಳನ್ನು ನೀಡಲು ಆಗದೆ ಅವರೇ ಸಮಸ್ಯೆಗೆ ಸಿಲುಕುತ್ತಾರೆ. ಸರ್ಕಾರ ನಡೆಸಲು ಕಾಂಗ್ರೆಸ್ ವಿಫಲವಾಗಿದೆ ಎಂದರು.