ಚಂಡೀಗಢ: ದೇಶದಲ್ಲಿ ಕೆಂಪು ಸುಂದರಿ, ಕಿಚನ್ ಕ್ವೀನ್ ಟೊಮೆಟೋ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಈ ನಡುವೆ ಪಂಜಾಬ್ನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ (Punjab Governor Banwarilal Purohit) ಅವರು ಟೊಮೆಟೋ ಬಳಕೆ ಮಾಡುವುದನ್ನು ನಿಲ್ಲಿಸುವಂತೆ ಕರೆ ನೀಡಿದ್ದಾರೆ.
ಪ್ರಸ್ತುತ ಕೆ.ಜಿ ಟೊಮೇಟೊ ಬೆಲೆ (Tomato Price) 200 ರೂಪಾಯಿಯ ಗಡಿದಾಟಿದೆ. ಮುಂದಿನ ದಿನಗಳಲ್ಲಿ ಇದರ ಬೆಲೆ 300 ರೂ. ಗಡಿ ದಾಟುವ ಸಾಧ್ಯತೆಗಳಿವೆ ಎಂದು ವ್ಯಾಪರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ರಾಜ್ಯದ ಜನತೆಗೆ ಈ ಕರೆ ನೀಡಿದ್ದಾರೆ.
ಕಳೆದ ಕೆಲವು ವಾರಗಳಿಂದ ಪಂಜಾಬ್ ಮತ್ತು ಚಂಡೀಗಢದಲ್ಲಿಯೂ ಟೊಮೆಟೋ ಬೆಲೆ ಭಾರೀ ಏರಿಕೆಯಾಗುತ್ತಿದ್ದು, ಜನ ಕಂಗಾಲಾಗಿದ್ದಾರೆ. ಯಾಕೆಂದರೆ ಅಡುಗೆಗೆ ಟೊಮೆಟೋ ಬೇಕೇ ಬೇಕಾಗುತ್ತದೆ. ಭಾರೀ ಮಳೆ ಹೀಗೆ ಹವಾಮಾನ ವೈಪರೀತ್ಯದಿಂದಾಗಿ ಕೆಲ ತಿಂಗಳುಗಳಿಂದ ಟೊಮೆಟೋ ಬೆಲೆಗಳು ನಾಶವಾಗುತ್ತಿದ್ದು, ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಬೆಲೆ ದಿಢೀರ್ ಏರಿಕೆ ಕಂಡಿದೆ