ಗದಗ;- ಜಿಲ್ಲೆಯ ಬೆಟಗೇರಿ ಅವಳಿ ನಗರದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಬೈಕ್ ರೈಡಿಂಗ್ ನಿಂದ ಜನರು ಹೈರಾಣಾಗಿದ್ದು ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೆಕ್ಕಲ್ಲ ಕಡಿವಾಣ ಹಾಕಲು ಮಂಗಳವಾರ ಮತ್ತು ಬುಧವರಾ ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆಯಲ್ಲಿ ತೋಡಗಿರುವ ಜಿಲ್ಲಾ ಪೊಲೀಸ್ ಇಲಾಖೆ ಮಕ್ಕಳಿಗೆ ಮತ್ತು ಬೈಕ್ ಚಲಾಯಿಸಲು ಅನುಮತಿ ನಿಡುವ ಪಾಲಕರಿಗೂ ಬಿಸಿ ಮುಟ್ಟಿಸಿದ್ದಾರೆ.
ದಾಳಿಯಲ್ಲಿ ಸಂದರ್ಭದಲ್ಲಿ ಅತ್ಯಂತ ಕರ್ಕಶವಾಗಿ ಶಬ್ದ ಮಾಡುವ ಸೈಲೆನ್ಸರ್ಗಳನ್ನು ಬಳಕೆ ಮಾಡುತ್ತಿದ್ದ 91 ದ್ವಿಚಕ್ರ ವಾಹನಗಳನ್ನು ನಾಶ ಮಾಡಿದ್ದಾರೆ.
ಕರ್ಕಶ ಶಬ್ದ ಹೊರಸೂಸುವ ಸೈಲೆನ್ಸರ್ ಗಳನ್ನು ಅಳವಡಿಸಿಕೊಡುಇವ ಗ್ಯಾರೇಜ್ಗಳಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಗದಗ ನಗರದ ಪೊಲೀಸ್ ಭವನದ ಆವರಣದಲ್ಲಿ ರೂಲರ್ ಹತ್ತಿಸಿ ಡಿಫೆಕ್ಟಿವ್ ಸೈಲೆನ್ಸರ್ ನಾಶ ಮಾಡಿದ್ದಾರೆ.
ರೂಲರ್ ಹತ್ತಿದ್ದಂತೆ ಕರ್ಕಶ ಶಬ್ದ ಬೀರ್ತಿದ್ದ ಸೈಲೆನ್ಸರ್ ಗಳು ಪುಡಿ ಪುಡಿ ಮಾಡಲಾಗಿದೆ.
ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದ ಡಿಫೆಕ್ಟಿವ್ ಸೈಲೆನ್ಸರ್ ಗಳು ಒಂದೇ ಏಟಿಗೆ 91 ದ್ವಿಚಕ್ರ ವಾಹನಗಳ ಡಿಫೆಕ್ಟಿವ್ ಸೈಲೆನ್ಸರ್ ನಾಶ ಮಾಡಲಾಗಿದೆ.
ಆ ಮೂಲಕ ಕರ್ಕಶ ಶಬ್ದ ಮಾಡಿಕೊಂಡು ಓಡಾಡೋ ರೋಡ್ ರೋಮಿಯೋಗಳಿಗೆ ಪೋಲೀಸರಿಂದ ವಾರ್ನಿಂಗ್ ನೀಡಲಾಗಿದೆ.
ಗ್ಯಾರೇಜ್ ಹಾಗೂ ಆಟೋಮೊಬೈಲ್ ಅಂಗಡಿಗಳಲ್ಲಿ ಇಂತಹ ಸೈಲೆನ್ಸರ್ ಗಳನ್ನ ಮಾರದಂತೆ ಎಚ್ಚರಿಕೆ ನೀಡಲಾಗಿದೆ.