ರಾಯಚೂರು ;- ಅಕ್ರಮ ಮರಳು ಸಾಗಾಣಿಕೆ ವಿರುದ್ಧ ದೇವದುರ್ಗ ಶಾಸಕಿ ಕರೆಯಮ್ಮ ಜಿ ಅವರು ಸಿಡಿದೆದ್ದಿದ್ದಾರೆ. ರಾತ್ರೋರಾತ್ರಿ ನಡು ರಸ್ತೆಯಲ್ಲಿ ನಿಂತು ಅಕ್ರಮ ಮರಳು ತಡೆದು ಏಕಾಂಗಿ ಹೋರಾಟ ನಡೆಸಿದ್ದಾರೆ.
ಇದೆ ವೇಳೆ ಮಾತನಾಡಿದ ಅವರು, ಅಕ್ರಮ ಮರಳನ್ನು ನಾನು ತಡೆದಿದ್ದೇನೆ. ತಾಕತ್ ಇದ್ರೇ ಈ ಅಕ್ರಮ ಮರಳು ವಾಹನಗಳನ್ನು ಜಪ್ತಿ ಮಾಡಲಿ ಎಂದು ಸವಾಲ್ ಹಾಕಿದ್ದಾರೆ. ಪೊಲೀಸರೇ… ಸಣ್ಣಪುಟ್ಟ ಟ್ರ್ಯಾಕ್ಟರ್ ಗಳನ್ನ ಸೀಜ್ ಮಾಡುತ್ತೀರಾ? ತಾಕತ್ ಇದ್ರೇ ಈ ದೊಡ್ಡ ಮಟ್ಟದ ವಾಹನಗಳನ್ನ ಸೀಜ್ ಮಾಡಿ. ಅಕ್ರಮ ದಂಧೆ ನಿಲ್ಲದಿದ್ರೇ ಮುಂದೆ ದೊಡ್ಡ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.