ಬಾಗಲಕೋಟೆ ;- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತಹಶೀಲ್ದಾರ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಬಕವಿಯ ಕೃಷ್ಣಾ ನದಿಗೆ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ನಮ್ಮ ನದಿಗೆ ನೀರು ಬಂದಿದೆ.
ಅಷ್ಟೊಂದು ಪ್ರಮಾಣದಲ್ಲಿ ನೀರು ಇಲ್ಲ ಮಹಾರಾಷ್ಟ್ರದ ಕೊಯ್ನಾ ಡ್ಯಾಮ್ ನಿಂದ 3 ಲಕ್ಷ ಕ್ಯೂಸೆಕ್ ನೀರ್ ಬಂದರೆ ನಮಗೆ ಪ್ರವಾಹ ಬರಬಹುದು. ಆದರೆ ಈಗಿನ ಮಟ್ಟದಲ್ಲಿ ಪ್ರವಾಹ ಭೀತಿಯಗೆ ಭಯಪಡುವ ಅಗತ್ಯವಿಲ್ಲ.
ನಮ್ಮ ತಾಲೂಕಿನ ಒಬ್ಬ ಅಧಿಕಾರಿಗಳನ್ನು ಸಾಂಗ್ಲಿಯಲ್ಲಿ ನಾವು ನೇಮಿಸಿದ್ದೇವೆ ದಿನದಿಂದ ದಿನಕ್ಕೆ ಮಹಾರಾಷ್ಟ್ರದಿಂದ ಕರ್ನಾಟಕ ಎಷ್ಟು ಪ್ರಮಾಣ ನೀರು ಹರಿದು ಬರುತ್ತದೆ ಎಂದು ಮಾಹಿತಿ ನೀಡುತ್ತಿದ್ದಾರೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ.
ತಮದಡ್ಡಿ ಮತ್ತು ಅಸ್ಕಿ ಗ್ರಾಮಗಳು ನದಿಯ ಪಕ್ಕದಲ್ಲಿ ಇರುವುದರಿಂದ ಪುನರ ವಸತಿ ನಿರ್ಮಿಸಬೇಕೆಂದು ಸರ್ಕಾರ ಚಿಂತನೆಯಲ್ಲಿತ್ತು ಅಷ್ಟರಲ್ಲಿ ಇದು ನ್ಯಾಯಾಲಯದ ಮೆಟ್ಟಿಲು ಎರಿವುದರಿಂದ ಸ್ವಲ್ಪ ತೊಂದರೆ ಆಗಿದೆ ಅದನ್ನು ಅತಿ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ
![Demo](https://prajatvkannada.com/wp-content/uploads/2023/08/new-Aston-Band.jpeg)