ಬೆಂಗಳೂರು ; ನಗರದ ಪೂರ್ವ ತಾಲೂಕು, ಕೆ.ಆರ್.ಪುರ ತಹಶೀಲ್ದಾರ್ ಎಸ್. ಅಜಿತ್ಕುಮಾರ್ ರೈ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಮನೆಯಲ್ಲಿದ್ದಿದ್ದನ್ನು ಕಂಡು ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದರು. ಪರಿಶೀಲನೆ ವೇಳೆ ಆದಾಯಕ್ಕೂ ಮೀರಿದ ಆಸ್ತಿಗಳಿಕೆ ಪತ್ತೆ ಹಾಗೂ ಸತತ 30 ಗಂಟೆ ಮನೆ ಪರಿಶೀಲನೆ ಬಳಿಕ ತಹಸೀಲ್ದಾರ್ ಅಜಿತ್ ರೈ ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಲಾಗಿದೆ.
Loka Raid: ತಹಸೀಲ್ದಾರ್ ಅಜಿತ್ ರೈ ಬಳಿ ಏನೆಲ್ಲಾ ಇವೆ ಗೊತ್ತಾ: ಲೋಕಾ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದೇಕೆ?
ಅಜಿತ್ ರೈಗೆ ಸಂಬಂಧಿಸಿದ 10 ಕಡೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು 40 ಲಕ್ಷ ನಗದು, 1.90 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ದಾಳಿ ವೇಳೆ ಅಜಿತ್ ರೈಗೆ ಸೇರಿದ 100 ಎಕರೆಗೂ ಅಧಿಕ ವಿವಿಧ ಆಸ್ತಿ ಪತ್ರಗಳು ಲಭ್ಯವಾಗಿದ್ದು, ಅಜಿತ್ ರೈ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಆಸ್ತಿ ಪತ್ರಗಳು ಪತ್ತೆಯಾಗಿವೆ. ಬೇನಾಮಿ ಹೆಸರಿನಲ್ಲಿ ಅಜಿತ್ ರೈ ಆಸ್ತಿ ಮಾಡಿರುವ ಶಂಕೆ ಹಿನ್ನೆಲೆ ಅಜಿತ್ ಮನೆಯಲ್ಲಿ ಶೋಧ ಕಾರ್ಯ ಹಾಗೂ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಅಲ್ಲದೆ, ಬೇನಾಮಿ ಆ್ಯಕ್ಟ್ ಅಡಿ ಕೇಸ್ ಕೂಡ ದಾಖಲಿಸಿದ್ದಾರೆ