ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯೋಗಾ ದಿನಾಚರಣೆ ನಡೆಯಿತು. ನಗರದ ನಂದಿಭವನ ದಲ್ಲಿ ನಡೆದ ಯೋಗ ದಿನಾಚರಣೆಗೆ ಜಿಲ್ಲಾಧಿಕಾರಿ ಡಿಎಸ.ರಮೇಶ ಹಾಗೂ ಎಡಿಸಿ ಕಾತ್ಯಾಯಿನಿದೇವಿ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಡಿಸಿ ಡಿ.ಎಸ.ರಮೇಶ್ ಪ್ರತಿಯೊಬ್ಬರೂ ಬಿಡುವು ಮಾಡಿಕೊಂಡು ನಿಯಮಿತವಾಗಿ ಯೋಗಾಭ್ಯಾಸ ನಡೆಸಿದರೆ ಕುಟುಂಬದ ಎಲ್ಲಾ ಸದಸ್ಯರು ಆರೋಗ್ಯವಾಗಿರಬಹುದು ಎಂದು ತಿಳಿಸಿದರು.
ನೆರೆದಿದ್ದ ನೂರಾರು ಯೋಗವಿದ್ಯಾರ್ಥಿಗಳಿಗೆ ಯೋಗ ಪಟುಗಳು ಯೋಗ ಬಂಗಿಗಳನ್ನು ತಿಳಿಸಿಕೊಟ್ಟರು. ಯೋಗ ದಿನಾಚರಣೆಯಲ್ಲಿ ಆಯುಷ್ ಇಲಾಖೆಯ ಅಧಿಕಾರಿ ಡಾ.ಸುಜಾತ,ಪಂಥಂಜಲಿ ಯೋಗ ಸಂಸ್ಥೆಯ ಅಧ್ಯಕ್ಷ ಹೆಚ್.ಜಿ.ಕುಮಾರ, ಯೋಗಗುರುಗಳಾದ ನಿಜಗುಣ ಅಜಿತ್ ಸೇರಿದಂತೆ ಯೋಗ ಪಟುಗಳು ಉಪಸ್ಥಿತರಿದ್ರು.