ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿದ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್,(Ravikumar) ಮಾಹಿತಿ ಪ್ರಕಾರ ಹೆಚ್ಡಿ ದೇವೇಗೌಡ ಮತ್ತು ಹೆಚ್ಡಿ ಕುಮಾರಸ್ವಾಮಿ ಅವರು ದೆಹಲಿಗೆ ಹೋಗಬಹುದು. ಇಬ್ಬರಿಗೂ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಆಹ್ವಾನ ಕೊಟ್ಟಿರಬಹುದು ಎಂದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು,
ಮೋದಿಗೆ ಬೆಂಬಲ ಕೊಡಲು ಅನೇಕ ಪಕ್ಷಗಳು ಮುಂದೆ ಬಂದಿವೆ. ಕೋವಿಡ್ ಸಂದರ್ಭದಲ್ಲಿ ಮೋದಿ ಜೊತೆ ದೇವೇಗೌಡರು ನಿಂತಿದ್ದರು. ಎನ್ಡಿಎ ಜೊತೆ ಹೋಗಲು ದೇವೇಗೌಡ ಮತ್ತು ಕುಮಾರಸ್ವಾಮಿ ಯೋಚಿಸುತ್ತಿದ್ದಾರೆ. ಇವರ ಚಿಂತನೆಯನ್ನು ಅಭಿನಂದಿಸುತ್ತೇನೆ. ನಮ್ಮ ಪಕ್ಷದ ನಾಯಕರು ಮುಂದಿನ ತೀರ್ಮಾನ ಮಾಡಲಿದ್ದಾರೆ ಎಂದರು.