ಬೆಂಗಳೂರು ಗ್ರಾಮಾಂತರ: ಆನೇಕಲ್ ತಾಲೂಕಿನ ಗಡಿಭಾಗದ ಇತಿಹಾಸ ಪ್ರಸಿದ್ಧ ಹೊಸೂರು ಬೆಟ್ಟದ ಮೇಲಿರುವ ಚಂದ್ರ ಚೂಡೇಶ್ವರ ದೇವಾಲಯದಲ್ಲಿ ಮಹಾಕುಂಭಾಭಿಷೇಕ ಮತ್ತು ಗೋಪುರವನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿಸಿದರು.
ಜೊತೆಗೆ ಹೆಲಿಕ್ಯಾಪ್ಟರ್ ನ ತರಿಸಿ ಹೂವನ್ನು ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ದೇವರ ಕೃಪೆಗೆ ಪಾತ್ರರಾದರು ಇನ್ನು ಗಂಗಾ ಯಮುನಾ ಕಾವೇರಿ ನರ್ಮದಾ ಗೋದಾವರಿ ಸೇರಿದಂತೆ ಹನ್ನೊಂದು ನದಿಗಳ ನೀರನ್ನು ತಂದು ಶುದ್ಧೀಕರಣವನ್ನು ಮಾಡಿದರು.
ಆ ನಂತರ ಗೋಪುರಕ್ಕೆ ಮಧುರೈನಿಂದ ಕರೆ ತಂದಿದ್ದ ಆಧ್ಯಾತ್ಮಿಕ ಗುರುಗಳಿಂದ ಗೋಪುರದ ಮೇಲೆ ಕಳಶವನಿಟ್ಟು ಪೂಜೆಯನ್ನು ಸಲ್ಲಿಕೆ ಮಾಡಿದರು ಇನ್ನು 12 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಾಭಿಷೇಕ ಮತ್ತು ಗೋಪುರ ನಿರ್ಮಾಣ ಕಾರ್ಯಕ್ಕೆ ಸಾವಿರಾರು ಭಕ್ತಾದಿಗಳು ಭಾಗಿಯಾಗಿದ್ದು ದೇವಿ ಕೃಪೆಗೆ ಪಾತ್ರರಾಗಿದ್ದರು.
ಇನ್ನು ಹೊಯ್ಸಳ ಮತ್ತು ಚೋಳರ ಕಾಲದಲ್ಲಿ ಚಂದ್ರಚೂಡೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿದ್ದು ಕರ್ನಾಟಕ ಆಂಧ್ರಪ್ರದೇಶ ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳ ದೈವ ಎಂದು ಗುರುತಿಸಿಕೊಂಡಿದೆ.. ಇನ್ನು ಬಂದ ಭಕ್ತಾದಿಗಳಿಗೆ ತೀರ್ಥ ವಿನ್ಯಾಯೋಗ ಮತ್ತು ಪ್ರಸಾದವನ್ನು ವಿತರಣೆ ಮಾಡಲಾಯಿತು..