ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಪುಂಡರ ಹಾವಳಿ ಹೆಚ್ಚಾಗಿದ್ದು ಪೊಲೀಸರ ಭಯವಿಲ್ಲದಂತೆ ವರ್ತಿಸುತ್ತಿದ್ದಾರೆ. ಇತ್ತೀಚಿಗೆ ವಿಲೀಂಗ್ ಮಾಡುತ್ತಾ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ ಪುಂಡರನ್ನು ಜೈಲಿಗಟ್ಟಿರುವ ಘಟನೆ ನಗರದ ವರ್ತೂರು ಬಳಿ ನಡೆದಿದೆ.
ಇವರ ಪಾಡಿಗೆ ಇವರು ವ್ಹೀಲಿಂಗ್ ಮಾಡುತ್ತಾ ದಾರಿಗೆ ಅಡ್ಡಲಾಗಿ ನಿಂತಿದ್ದಕ್ಕೆ ಹಾರ್ನ್ ಮಾಡಿ ದಾರಿ ಕೇಳಿದ್ರೆ ಏನ್ ಮಾಡಿದ್ರು ಗೊತ್ತಾ, ಕಾರು ಅಡ್ಡಗಟ್ಟಿ, ಚಾಲಕನ ಮೇಲೆ ದರ್ಪ ತೋರಿದ ಘಟನೆ ಗುರುವಾರ ಮಧ್ಯಾಹ್ನ 2.30ರ ವೇಳೆಯಲ್ಲಿ ನಡೆದಿದೆ.
ಹೌದು ರಸ್ತೆಯಲ್ಲಿ 3-4 ಬೈಕ್ ಸವಾರರು ಸೇರಿ ಅಡ್ಡಾದಿಡ್ಡಿ ಚಾಲನೆ ಮಾಡುತ್ತಿದ್ದರು. ಈ ವೇಳೆ ಕಾರು ಚಾಲಕ ದಾರಿ ಬಿಡುವಂತೆ ಹಿಂಬದಿಯಿಂದ ಹಾರ್ನ್ ಮಾಡಿದ್ದಾನೆ. ಇದಕ್ಕೆ ರೊಚ್ಚಿಗೆದ್ದ ಪುಂಡರು ಬೈಕ್ ನಿಲ್ಲಿಸಿ ಬಂದು ಚಾಲಕನ ಜತೆ ಗಲಾಟೆ ಮಾಡಿದ್ದಾರೆ.
ಇನ್ನು ಹಾರ್ನ್ ಮಾಡಿದ್ದಕ್ಕೆ ನಡುರಸ್ತೆಯಲ್ಲಿ ಬೈಕ್ ನಿಲ್ಲಿಸಿ ಓರ್ವ ಅಸಾಮಿ ಬಂದಿದ್ದಾನೆ. ಇದಾದ ಬಳಿಕ ಆತನ ಜೊತೆಗೆ ಮತ್ತೆ ಮೂವರು ಜಮಾಯಿಸಿ ಕಾರು ಚಾಲಕನ ಮುಂದೆ ದರ್ಪ ತೋರಿದ್ದಾರೆ. ಅಷ್ಟೇ ಅಲ್ಲದೇ ಮತ್ತೊರ್ವ ಬೈಕ್ನಿಂದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಅಪಾರ್ಟ್ಮೆಂಟ್ವರೆಗೂ ಕಾರು ಫಾಲೋ ಮಾಡಿಕೊಂಡು ಬಂದ ಗ್ಯಾಂಗ್ ಅಲ್ಲಿಯೂ ಕಾರು ಜಗಳಕ್ಕೀಳಿದು ಕಾರಿನ ಗಾಜು ಒಡೆದು ಪುಂಡಾಟ ಮೆರೆದಿದ್ದಾರೆ. ಆದಷ್ಡು ಬೇಗ ಪೊಲೀಸರು ಈ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.