ಚಾಮರಾಜನಗರ: 13 ಬಾರಿ ಬಜೆಟ್ ಮಂಡಿಸಿದ ತಕ್ಷಣ ಭತ್ತ ಬೆಳೆದು ಅಕ್ಕಿ ಕೊಡಲು ಆಗಲ್ಲ ಎಂದು ಚಾಮರಾಜನಗರದಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಆದವರಿಗೆ ಮುಂದಾಲೋಚನೆ ಇರಬೇಕು. ದೇಶಾದ್ಯಂತ ಮಳೆ ಅಭಾವ ಇದೆ, ಆಹಾರ ಕೊರತೆ ಇದೆ. ಆಹಾರ ಭದ್ರತೆಗಾಗಿ ಕೇಂದ್ರ ಸರ್ಕಾರ ಮೊದಲೇ ನಿರ್ಧಾರ ಮಾಡಿದೆ.
ಕಾಂಗ್ರೆಸ್ ಸರ್ಕಾರ ಬರುವ ಮುನ್ನ ತೆಗೆದುಕೊಂಡ ನಿರ್ಧಾರ ಇದು. ಸರ್ವರ್ ಹ್ಯಾಕ್ ಮಾಡ್ತಾರೆ ಅಂತಾ ಸಚಿವರು ಆರೋಪ ಮಾಡಿದ್ದಾರೆ. ಇಂತಹ ಸರ್ಕಾರ ಬಂದಿದೆಯಲ್ಲ ಅಂತಾ ಬೇಸರವಾಗುತ್ತೆ. ಕರ್ನಾಟಕಕ್ಕೆ ಎಂತಹ ದುರ್ದೈವ ಸ್ಥಿತಿ ಬಂತು ಅಂತಾ ಬೇಸರವಾಗುತ್ತೆ ಎಂದರು.