ಬೆಂಗಳೂರು ;- ಡೇ ಕೇರ್ ನಲ್ಲಿಮಕ್ಕಳನ್ನ ಬಿಡುವ ಪೋಷಕರೇ ಮಿಸ್ ಮಾಡ್ದೆ ಈ ದೃಶ್ಯ ನೋಡಿ. ಈ ದೃಶ್ಯ ನೋಡಿದ್ರೆ ಅಯ್ಯೋ ಅಯ್ಯೋ ಪಾಪ ಅನ್ನಿಸದೇ ಇರಲ್ಲಾ..
ಸಣ್ಣ ಮಗು ಇನ್ನೊಂದು ಸಣ್ಣ ಮಗುವಿಗೆ ಹೊಡೆದಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೌದು ಸಣ್ಣ ಮಕ್ಕಳು ಬಡಿದಾಡಿಕೊಂಡರು ಅಲ್ಲಿನ ಆಯಾ ಎಷ್ಟರ ಮಟ್ಟಿಗೆ ನಿರ್ಲಕ್ಷ್ಯ ತೋರಿದ್ದಾರೆ ಎಂಬುವುದು ವಿಡಿಯೋದಲ್ಲಿ ಗಮನಿಸಬಹುದು.
ಇಷ್ಟೆಲ್ಲಾ ದೃಶ್ಯ ಕಂಡು ಬಂದಿದ್ದು, ಸುಬ್ರಹ್ಮಣ್ಯ ಪುರದಲ್ಲಿ ಇರೋ ಟೆಂಡರ್ ಪೂಟ್ ಡೇ ಕೇರ್ ಸೆಂಟರ್ ನಲ್ಲಿ. ಈ ಡೇ ಕೇರ್ ಸೆಂಟರ್ ಅಲ್ಲಿ ಮಕ್ಕಳನ್ನು ನೋಡಿಕೊಳ್ತಾ ಇದ್ದ ಆಯಾ ಒಂದು ಮಗುವನ್ನು ಹೊರಗೆ ಕರೆದುಕೊಂಡು ಹೋಗಿದ್ದ ವೇಳೆ ಒಂದು ಮಗು ಇನ್ನೊಂದು ಮಗುವನ್ನು ಹಿಡಿದುಕೊಂಡು ಹೊಡೆದಿದೆ. ಸುಮಾರು ಮೂರು ನಾಲ್ಕು ನಿಮಿಷ ಹೊಡೆದ್ರೂ ಮಕ್ಕಳನ್ನ ನೋಡಿಕೊಳ್ಳಲು ಅಲ್ಲಿಗೆ ಯಾರು ಬರೋದೆ ಇಲ್ಲ. ನಾಲ್ಕೈದು ನಿಮಿಷ ಮಕ್ಕಳು ಜಗಳ ಮಾಡಿಕೊಂಡರು ಅಲ್ಲಿನ ಆಯಾ ಅಲ್ಲಿಗೆ ಬರದೇ ನಿರ್ಲಕ್ಷ್ಯ ತೋರಿದ್ದಾರೆ.
ಈ ವಿಡಿಯೋ ಸಿಸಿಟಿವಿಯಲ್ಲಿ ಗಮನಿಸಿದ ಪೋಷಕರು, ಟ್ವಿಟರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸುಬ್ರಮಣ್ಯ ಪುರ ಪೊಲೀಸರಿಗೆ ಆಗ್ರಹಿಸಿದ್ದಾರೆ.