ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋಧಿ (Prime Minister Modi) ಅವರ ನೇತೃತ್ವದ ಕೇಂದ್ರ ಸರ್ಕಾರದ 9 ವರ್ಷದ ಜನಪರ ಆಡಳಿತ ಹಾಗೂ ಸಾಧನೆ ಕುರಿತು, ಬಿಜೆಪಿ ವತಿಯಿಂದ ಹುಬ್ಬಳ್ಳಿಯ ಖಾಸಗಿ ಹೊಟೇಲ್ನಲ್ಲಿ ಪ್ರಬದ್ಧರ ಬೃಹತ್ ಸಭೆಯನ್ನು ಮಾಡಿದರು. ಈ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, (Union Minister Prahlada Joshi)ಆರ್ಥಿಕ ತಜ್ಞರಾದ ವಿಶ್ವನಾಥ್ ಭಟ್,
ಶಾಸಕ ಮಹೇಶ್ ಟೆಂಗಿನಕಾಯಿ, ಶಾಸಕ ಎಂ.ಆರ್ ಪಾಟೀಲ್, ಮೇಯರ್ ವೀಣಾ ಭಾರದ್ವಾಡ್, ಬಿಜೆಪಿ ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಭಾಗವಹಿಸಿದ್ದರು. ಈ ಸಭೆಯಲ್ಲಿ ಸಾವಿರಾರು ಜನರು ಕೂಡ ಭಾಗವಹಿಸಿದ್ದು, ಆರ್ಥಿಕ ತಜ್ಞ ವಿಶ್ವನಾಥ ಭಟ್ ಅವರು ವಿಶೇಷ ಉಪನ್ಯಾಸ ಮಾಡಿದರು.