ಬೆಂಗಳೂರು: 2014ರಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ನಿರ್ಧಾರ ಮಾಡಿತ್ತಂತೆ..ಸ್ವತಃ ಪ್ರಧಾನಿಗಳೇ,ಹೆಚ್ ಡಿ ಕುಮಾರಸ್ವಾಮಿಗೆ ಬಿಗ್ ಆಫರ್ ನೀಡಿದ್ದಾರಂತೆ.ಪ್ರಧಾನಿಗಳ ಆಫರ್ ಒಪ್ಪಿದಿದ್ರೆ ಕುಮಾರಸ್ವಾಮಿ ಐದು ವರ್ಷ ಸಿಎಂ ಆಗುತ್ತಿದ್ರಂತೆ..ಹಾಗಾದ್ರೆ, HDK ಇವತ್ತು ಬಿಚ್ಚಿಟ್ಟ ಮೋದಿ ಭೇಟಿ ಸೀಕ್ರೆಟ್ ನ,ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.
ರಾಜ್ಯಪಾಲರ ಭಾಷಣದ ಮೇಲೆ ಸಿಎಂ ಸಿದ್ದರಾಮಯ್ಯ ಇಂದು ವಿಧಾನಸಭೆಯಲ್ಲಿ ಭಾಷಣ ಮಾಡುತ್ತಿದ್ರು.ಈ ವೇಳೆ ಆಪರೇಷನ್ ಕಮಲ ಬಗ್ಗೆ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ರು.ಆಪರೇಷನ್ ಕಮಲ ಬಗ್ಗೆ ಕಾಂಗ್ರೆಸ್ – ಬಿಜೆಪಿ ನಡುವೆ ಮಾತಿನ ವಾಕ್ಸಮರವೇ ನಡೆಯುತ್ತಿತ್ತು.ಈ ಸಂದರ್ಭದಲ್ಲೇ ಎದ್ದು ನಿಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ,2018 ರ ಜೆಡಿಎಸ್- ಬಿಜೆಪಿ ಮೈತ್ರಿ ಪ್ರಸ್ತಾಪದ ಚರ್ಚೆಯನ್ನ ಇದೇ ಮೊದಲ ಬಾರಿಗೆ ಸದನದಲ್ಲಿ ರಿವೀಲ್ ಮಾಡಿದ್ದಾರೆ.
2018ರಲ್ಲಿ ಕಾಂಗ್ರೆಸ್ – ಜೆಡಿಎಸ್ ಪಕ್ಷದ ಮೈತ್ರಿ ಸರ್ಕಾರ ರಚನೆಯಾಗಿತ್ತು.ಕೇವಲ 14 ತಿಂಗಳಲ್ಲೇ ಮೈತ್ರಿ ಸರ್ಕಾರ ಬಿದ್ದು ಹೋಗಿತ್ತು.ಆದ್ರೆ ಅಂದು ನಡೆದ ವಿಶೇಷ ಘಟನೆಯನ್ನ ಹೆಚ್ಡಿಕೆ ಇಂದು ರಿವೀಲ್ ಮಾಡಿದ್ದಾರೆ.ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಪ್ರಧಾನಿಗಳನ್ನ ನಾನು ಭೇಟಿಯಾಗಿದ್ದೆ.ಆಗ ನಮ್ಮ ಜೊತೆ ಮೈತ್ರಿ ಮಾಡಿಕೊಳ್ಳಿ.ನೀವೇ ಐದು ವರ್ಷ ಸಿಎಂ ಆಗಿ ಎಂದು ಪ್ರಧಾನಿ ಮೋದಿಯವರು ಹೇಳಿದ್ದರು.ಆಗ ಅವರ ಮಾತು ಕೇಳಿದ್ದಿದ್ರೆ, ನಾನೇ ಐದು ವರ್ಷ ಸಿಎಂ ಆಗ್ತಿದ್ದೆ..ಆದ್ರೆ ಕಾಂಗ್ರೆಸ್ ಜೊತೆ ಹೋಗಿ ಸರ್ಕಾರ ಬೀಳಬೇಕಾಯ್ತು ಅನ್ನೋ ಮಾತನ್ನ ಹೇಳಿ ಕುತೂಹಲ ಮೂಡಿಸಿದ್ರು.
ಒಟ್ಟಾರೆ, ಐದು ವರ್ಷದ ಹಿಂದಿನ ಮೈತ್ರಿ ಸೀಕ್ರೆಟ್ ನ್ನ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಇಂದು ರಿವೀಲ್ ಮಾಡಿದ್ದಾರೆ.ಒಂದು ವೇಳೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ರೆ, ಹೆಚ್ಡಿಕೆ ಕುಮಾರಸ್ವಾಮಿ ಐದು ವರ್ಷ ಸಿಎಂ ಆಗುತ್ತಿದ್ರು ಆದ್ರೆ,ಯಡಿಯೂರಪ್ಪನೂ ಸಿಎಂ ಆಗ್ತಿರಲಿಲ್ಲ ಬೊಮ್ಮಾಯಿ ನೂ ಸಿಎಂ ಆಗ್ತಿರಲಿಲ್ಲಾ ಅನ್ನೋ ಉದ್ದೇಶ ಇದ್ರ ಹಿಂದೆ ಇತ್ತು ಎನ್ನಲಾಗ್ತಿದೆ.