ಬೆಂಗಳೂರು: ದಿನೇ ದಿನೇ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ದರ ಏರಿಕೆಯಿಂದ ಬೆಂದಿರುವ ಜನರಿಗೆ ಮತ್ತೊಂದು ಆಘಾತ ಎದುರಾಗುವ ಸಾಧ್ಯತೆ ಇದೆ.ವಿದ್ಯುತ್ ದರ ,ಹಾಲಿನ ದರ ಏರಿಕೆ ಮುನ್ಸೂಚನೆ ಬೆನ್ನಲ್ಲೇ ಇದೀಗ ಹೋಟೆಲ್ ದುನಿಯಾ ಮತ್ತಷ್ಟು ದುಬಾರಿಯಾಗೋ ಮುನ್ಸೂಚನೆ ಸಿಕ್ಕಿದೆ..
ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ತರಕಾರಿ, ದಿನಸಿ ಸೇರಿದಂತೆ ಎಲ್ಲ ದಿನಬಳಕೆಯ ವಸ್ತುಗಳ ಬೆಲೆ ಆಕಾಶಕ್ಕೆ ಏರಿದೆ.ಇದರ ನಡುವೆ ಜೀವನ ಮಾಡೋದೆ ಕಷ್ಟ ಎನ್ನಿಸಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ದರ ಇಳಿಸಿದ ಸರ್ಕಾರ, ಉದ್ಯಮಿಗಳಲ್ಲಿ ಮುಖದಲ್ಲಿ ಮಂದಹಾಸ ಮೂಡಿಸಿತ್ತು.ಆದ್ರೆ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ ಮತ್ತೆ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ಹೆಚ್ಚಳ ಮಾಡ್ತಾ ಬಂದಿದೆ.ಜೊತೆಗೆ ಇದೀಗ ವಿದ್ಯುತ್ ದರ ಏರಿಕೆ ಕಂಡಿದ್ದು,ಹಾಲಿನ ದರವೂ ಹೆಚ್ಚಳ ಸುಳಿವು ಸಿಕ್ಕಿದೆ.ಇದ್ರ ನಡುವೆ ಹೋಟೆಲ್ ಮಾಲೀಕರು ಹೋಟೆಲ್ ತಿಂಡಿ- ಕಾಫಿ ದರ ಗಳ ಪರಿಷ್ಕರಣೆಗೆ ಸಿದ್ದತೆ ನಡೆಸಿವೆ.
ಸದ್ಯ ಈಗಾಗ್ಲೇ ತರಕಾರಿ ಸೇರಿದಂತೆ ಅಗತ್ಯ ಸಾಮಾಗ್ರಿಗಳ ದರ ಬಲು ದುಬಾರಿಯಾಗಿದೆ.ಇದರ ನಡುವೆ ಸಿಲಿಂಡರ್ ದರ ಏರಿಕೆ ಮಾಡಿದೆ.ಇದು ಹೋಟೆಲ್ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.ಸರ್ಕಾರ ಪದೇ ಪದೇ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನ ಏರಿಕೆ ಮಾಡ್ತಿದೆ.ಇದರಿಂದ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬೀಳ್ತಿದೆ.ವಿದ್ಯುತ್ ದರ ಹೆಚ್ಚಳದಿಂದ ಹೋಟೆಲ್ ಮಾಲೀಕರಿಗೆ ಸಂಕಷ್ಟ ಎದುರಾಗಿದೆ.ಹೀಗಾಗಿ ಬೆಲೆ ಏರಿಕೆ ನಿಯಂತ್ರಣ ಬಾರದಿದ್ರೆ ಹೋಟೆಲ್ ತಿಂಡಿ ಕಾಫಿ ಟೀ ದರ ಅನಿವಾರ್ಯ ವಾಗಿ ಹೆಚ್ಚಳ ಮಾಡಲಾಗ್ತದೆ ಅಂತ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ತಿಳಿಸಿದ್ದಾರೆ.
ಸದ್ಯ 14 ಕೆ ಜಿ ತೂಕದ ಮನೆ ಬಳಕೆ ಸಿಲಿಂಡರ್ 1055 ನಿಂದ 1105 ರೂ ಏರಿಕೆ ಆಗಿದೆ.ಇನ್ನೂ ವಾಣಿಜ್ಯ ಬಳಕೆಯ 19 ಕೆಜಿ ತೂಕದ ಸಿಲಿಂಡರ್ 1839 ರಿಂದ 2190 ಆಗಿದೆ.ಇದರಿಂದ ಹೋಟೆಲ್ಗಳಿಗೆ ಅಧಿಕ ಹೊರೆಯಾಗಿದೆ.ಇದ್ರ ಹೊರೆ ತಪ್ಪಿಸಲು ಗ್ರಾಹಕರಿಗೆ ಬರೆ ಹಾಕಲು ಹೋಟೆಲ್ ಮಾಲೀಕರು ನಿರ್ಧಾರ ಮಾಡಿದ್ದಾರೆ. ಕಳೆದ ಕೆಲ ವರ್ಷದಷ್ಟೇ ಹೋಟೆಲ್ ಮಾಲೀಕರು ಊಟ, ತಿಂಡಿ ದರ ಏರಿಸಿದ್ದರು. ಈ ನಡುವೆ ಮತ್ತೊಮ್ಮೆ ಹೇಗೆ ದರ ಏರಿಕೆ ಮಾಡೋದು ಅಂತ ಹೋಟೆಲ್ ಮಾಲೀಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.ಆದ್ರೆ ಒಂದು ವೇಳೆ ದರ ಏರಿಕೆ ಮಾಡಿದರೆ ಗ್ರಾಹಕರು ಜೇಬು ಸುಡಲಿದೆ