ಬೆಂಗಳೂರು: ಉಡುಪಿಯಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ.
ಮಣಿಪುರ ಹೊತ್ತಿ ಉರಿಯುತ್ತಿದೆ, ಅದರ ಬಗ್ಗೆ ಯಾರೂ ಮಾತನಾಡ್ತಿಲ್ಲ. ಅಲ್ಲಿ ಮಹಿಳೆಯರ ಮೇಲೆ ರೇಪ್ ಆಗಿದೆ, ಇಲ್ಲಿ ಕ್ಯಾಮರಾ ಅಂತಿದ್ದೀರಾ. ಕಾಂಗ್ರೆಸ್, ಬಿಜೆಪಿಯವರು ನಮ್ಮನ್ನು ತೋರಿಸಿ ವೋಟ್ ಪಡೆದರು. ಎರಡೂ ಪಕ್ಷಗಳು ಜೆಡಿಎಸ್ ಕಡೆ ಬೆರಳು ಮಾಡಿ ವೋಟ್ ಪಡೆದವು. ಭಯೋತ್ಪಾದನೆ ಶುರುವಾಗ್ತಿದೆ ಅನ್ನೋದು ಅವರಿಗೆ ಚುನಾವಣೆ ವಿಷಯ ಎಂದು ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ JDS ರಾಜ್ಯಾಧ್ಯಕ್ಷ ಇಬ್ರಾಹಿಂ ಕಿಡಿಕಾರಿದರು.
ಬಿಜೆಪಿ ಪತ್ರದಲ್ಲಿ ಹೆಚ್ಡಿ ಕುಮಾರಸ್ವಾಮಿ ಸಹಿ ಬಗ್ಗೆ ಕಾಂಗ್ರೆಸ್ ಟೀಕೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ. ಪರಸ್ಪರವಾಗಿ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದಾರೆ ಅಷ್ಟೇ. ಜನತಾದಳ ಮಣ್ಣಿನ ಪಕ್ಷ, ನಾವು ಏನಾದ್ರೂ ಮಾಡಿದ್ರೆ ಹೇಳ್ತೀರಾ. ಮಮತಾ, ನಿತೀಶ್ ಇಬ್ಬರೂ ಬಿಜೆಪಿ ಜೊತೆಗೆ ಹೋಗಿ ಬಂದವರೇ ಎಂದರು.