ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್ ಹೊರೆ (School Bag Weight) ಇಳಿಸುವ ಬಗ್ಗೆ ಶಿಕ್ಷಣ ಇಲಾಖೆ (Education Department) ಮಹತ್ವದ ಆದೇಶ ಹೊರಡಿಸಿದೆ. 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ ತೂಕವನ್ನು ಶಿಕ್ಷಣ ಇಲಾಖೆ ನಿಗದಿ ಮಾಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಈ ಮಹತ್ವದ ಆದೇಶವನ್ನು ಹೊರಡಿಸಿದ್ದು, ಈ ನಿಯಮ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತದೆ. ಕಡ್ಡಾಯವಾಗಿ ಎಲ್ಲಾ ಶಾಲೆಗಳು ಈ ನಿಯಮವನ್ನು ಪಾಲನೆ ಮಾಡಬೇಕೆಂದು ಶಿಕ್ಷಣ ಇಲಾಖೆ ಆದೇಶಿಸಿದೆ.
ತರಗತಿ ಮತ್ತು ತೂಕದ ವಿವರ:
1-2ನೇ ತರಗತಿ – 1.5 ರಿಂದ 2 ಕೆಜಿ
3-5ನೇ ತರಗತಿ – 2-3 ಕೆಜಿ
6-8ನೇ ತರಗತಿ – 3-4 ಕೆಜಿ
9-10ನೇ ತರಗತಿ – 4-5 ಕೆಜಿ
ಹೊರೆ ಇಳಿಸಲು ಅಧ್ಯಯನ ನಡೆಸಿದ ಡಿಎಸ್ಇಆರ್ಟಿ:
ಎನ್ಎಲ್ಎಸ್ಯುಐ, ಸೆಂಟರ್ ಫಾರ್ ಚೈಲ್ಡ್ ಲಾ ಇವರ ಸಹಯೋಗದೊಂದಿಗೆ ಅಧ್ಯಯನ ಮಾಡಿದ ಡಿಎಸ್ಇಆರ್ಟಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿಯಲ್ಲಿ ವಿದ್ಯಾರ್ಥಿಗಳ ದೇಹದ ತೂಕದ 10-15% ರಷ್ಟು ತೂಕದ ಶಾಲಾ ಬ್ಯಾಗ್ ತೆಗೆದುಕೊಂಡು ಹೋಗಲು ಶಿಫಾರಸ್ಸು ಮಾಡಿದೆ. ಮೂಳೆ ತಜ್ಞರ ಶಿಫಾರಸ್ಸಿನ ಮೇರೆಗೆ ಡಿಎಸ್ಇಆರ್ಟಿ ಬ್ಯಾಗ್ ತೂಕದ ವರದಿ ನೀಡಿದ್ದು, ಇದನ್ನು ಅನ್ವಯಿಸಿ ಶಿಕ್ಷಣ ಇಲಾಖೆ ಶಾಲಾ ಬ್ಯಾಗ್ನ ತೂಕವನ್ನು ಕಡಿಮೆ ಮಾಡಿದೆ.
ಕಡಿಮೆ ತೂಕದ ಬ್ಯಾಗ್ ನಿಯಮ ಜಾರಿ ಹೇಗೆ?
* ಶಾಲಾ ಎಸ್ಎಂಸಿ, ಎಸ್ಡಿಎಂಸಿ ಹಾಗೂ ಶಾಲ ಮುಖ್ಯಸ್ಥರು ಇಲಾಖೆ ಆದೇಶ ಪಾಲನೆಗೆ ಕ್ರಮವಹಿಸಬೇಕು.
* 1ರಿಂದ 5ನೇ ತರಗತಿಯವರೆಗೆ ಎನ್ಸಿಇಆರ್ಟಿ ನಿಗದಿಪಡಿಸಿರೋ ಪಠ್ಯಕ್ರಮವನ್ನು ಮಾತ್ರ ಶಾಲೆಗಳು ಬೋಧನೆ ಮಾಡಬೇಕು.
* ಬೇರೆ ಯಾವುದೇ ಪಠ್ಯ ಕ್ರಮ ಬೋಧನೆ ಮಾಡುವಂತೆ ಇಲ್ಲ.
* ಒಂದು ವೇಳೆ ನಿಯಮ ಮೀರಿ ಬೇರೆ ಪಠ್ಯ ಕ್ರಮ ಬೋಧನೆ ಮಾಡಿದರೆ ಶಾಲೆ ಮಾನ್ಯತೆ ರದ್ದು ಮಾಡಲಾಗುತ್ತದೆ.
* ಶಿಕ್ಷಣ ಇಲಾಖೆ ನಿಯಮ ಪಾಲನೆ ಮಾನಿಟರ್ ಮಾಡಲು ವಿಶೇಷ ತಂಡ ರಚನೆ ಮಾಡಿ ತಪಾಸಣೆ ಮಾಡಿಸುವುದು.
* ಕ್ಲಸ್ಟರ್ ಹಂತದಲ್ಲಿ ಸಿಆರ್ಪಿ ಮತ್ತು ಇಸಿಒಗಳು, ಬ್ಲಾಕ್ ಹಂತದಲ್ಲಿ ಬಿಆರ್ಸಿ ಮತ್ತು ಬಿಇಒಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು.
* ಜಿಲ್ಲಾ ಹಂತದಲ್ಲಿ ಡಿಡಿಪಿಐಗಳು, ಡಯಟ್ ಪ್ರಾಂಶುಪಾಲರು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು.