ಧಾರವಾಡ ;- ವಿದ್ಯುತ್ ದರ ಏರಿಕೆ ಖಂಡಿಸಿ ಧಾರವಾಡದಲ್ಲಿ ಇಂದು ನಡೆದ ಪ್ರತಿಭಟನೆ ಯಶಸ್ವಿಯಾಗಿದೆ. ನಗರದ ಕೆಸಿಸಿ ಬ್ಯಾಂಕ್ ವೃತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ರ್ಯಾಲಿ ಜರುಗಿದ್ದು, ವಿವಿಧ ವರ್ತಕರು, ಉಧ್ಯಮಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ರ್ಯಾಲಿ ಉದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ. ಏಕಾಏಕಿ ವಿದ್ಯುತ್ ದರ ಏರಿಕೆಯಿಂದಾಗಿ ವಾಣಿಜೋದ್ಯಮಿಗಳಿಗೆ ಸಂಕಷಕ್ಕೆ ಸಿಲುಕಿದ್ದಾರೆ. ಸರ್ಕಾರ ಏಕಾಏಕಿ ವಿದ್ಯುತ್ ದರ ಏರಿಕೆ ಮಾಡಿರುವುದು ಖಂಡನೀಯ. ಈ ಹಿಂದೆ ಇದ್ದ ವಿದ್ಯುತ್ ದರವನ್ನೇ ಮುಂದುವರೆಸಿಬೇಕು. ವಿದ್ಯುತ್ ದರ ಏರಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ ದರ ಏರಿಕೆ ಹಿಂಪಡೆಯದಿದ್ದರೆ ಹೋರಾಟ ಮತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ವಿನಯ ಜವಳಿ,
ಇಂದಿನ ಬಂದ್ ಬಹುತೇಕ ಯಶಸ್ವಿಯಾಗಿದೆ. ಹುಬ್ಬಳ್ಳಿ- ಧಾರವಾಡದ ೪೦ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ರಾಜ್ಯಾದ್ಯಂತ 25 ಜಿಲ್ಲಾ ಸಂಘಗಳು ಬೆಂಬಲ ನೀಡಿವೆ. ಮಂಡ್ಯದಿಂದ ಕಲ್ಬುರ್ಗಿ ವರೆಗೆ ಸ್ವಯಂಪ್ರೇರಿತ ಬಂದ್ ಆಗಿದೆ. ಈಗಿನ ವಿದ್ಯುತ್ ದರ ಹೆಚ್ಚಳ ಹಿಂತೆಗೆದುಕೊಳ್ಳಬೇಕು. ಕಡಿಮೆ ದರ ಏರಿಕೆ ಮಾಡಬೇಕು. ಸರ್ಕಾರ ಶೀಘ್ರವೇ ವಾಣಿಜ್ಯೋದ್ಯಮ ಸಂಸ್ಥೆಗಳ ಜೊತೆ ಸಭೆ ಮಾಡಬೇಕು.
ಸಭೆಗೆ ಉತ್ತರ ಕರ್ನಾಟಕದ ಸಂಘದವರನ್ನು ಪರಿಗಣಿಸಬೇಕು. ಬೆಂಗಳೂರು ಕೇಂದ್ರಿತ ಸಂಘಟನೆಗಳನಷ್ಟೇ ಪರಿಗಣಿಸಬಾರದು. ನಮ್ಮನ್ನೂ ಕರೆದು ಚರ್ಚೆ ಮಾಡಬೇಕು. ನಾವು ಸರ್ಕಾರಕ್ಕೆ ಯಾವುದೇ ಗಡುವು ಕೊಡುವುದಿಲ್ಲ. ಇವತ್ತಿನ ಬಂದ್ ನೋಡಿಯಾದರೂ ಸರ್ಕಾರ ತಿಳಿದುಕೊಳ್ಳಲಿ. ಇದನ್ನೆಲ್ಲ ನೋಡಿದ ಬಳಿಕ ಅವರು ಬೇಗ ನಿರ್ಣಯ ಕೈಗೊಳ್ಳುವ ಮನಸ್ಸು ಮಾಡಬೇಕು ಎಂದು ಹೇಳಿದ್ದಾರೆ.