ಬೆಂಗಳೂರು : ಈ ಸರ್ಕಾರ ಬಂದ ಮೇಲೂ ಸಾಬ್ರಿಗೆ ರಕ್ಷಣೆ ಇಲ್ಲ ಎಂದು ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಕುಟುಕಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ರೇವಣ್ಣ, ಹಾಸನ ಆರ್ಟ್ಸ್ ಕಾಲೇಜಿನಲ್ಲಿ ಮುಸ್ಲಿಮರು ಎಂಬ ಕಾರಣಕ್ಕಾಗಿ ಪ್ರಾಂಶುಪಾಲ ಹುದ್ದೆ ಕೊಟ್ಟಿಲ್ಲ. ಮುಸ್ಲಿಂ ವ್ಯಕ್ತಿಗೆ ಸೀನಿಯಾರಿಟಿ ಇದ್ದರೂ ಅವರಿಗೆ ಹುದ್ದೆ ಕೊಟ್ಟಿಲ್ಲ. ಬದಲಾಗಿ ಜೂನಿಯರ್ ವ್ಯಕ್ತಿಗೆ ಹುದ್ದೆ ನೀಡಲಾಗಿದೆ. ಇನ್ನೂ ಸಾಬ್ರಿಗೆ ರಕ್ಷಣೆ ಇಲ್ಲ. ಈ ಸರ್ಕಾರದ ಬಂದ ಮೇಲೂ ರಕ್ಷಣೆ ಇಲ್ಲ ಎಂದು ಹೇಳಿದರು.
ಇನ್ನೂ ಸಾಬ್ರಿಗೆ ರಕ್ಷಣೆ ಇಲ್ಲ. ಈ ಸರ್ಕಾರದ ಬಂದ ಮೇಲೂ ರಕ್ಷಣೆ ಇಲ್ಲ. ಈಗಲಾದರೂ ಸಾಬ್ರಿಗೆ ರಕ್ಷಣೆ ಕೊಡಿ. ಸಾಬ್ರು ಇಷ್ಟೆಲ್ಲ ನಿಮಗೆ ವೋಟು ಹಾಕಿದ್ದಾರೆ. ಸಚಿವರಿಗೆ ಸೂಚನೆ ನೀಡಬೇಕು. ಅದನ್ನು ಸರಿಪಡಿಸಿ ಎಂದು ಹೆಚ್.ಡಿ ರೇವಣ್ಣ ಆಗ್ರಹಿಸಿದರು.