ಮೈಸೂರು;- ಮೈಸೂರು- ಬೆಂಗಳೂರು ರಾ.ಹೆದ್ದಾರಿಯಲ್ಲಿ ಇನ್ಮುಂದೆ ಇಷ್ಟಬಂದಂಗೆ ವಾಹನ ಚಲಾಯಿಸುವ ಮುನ್ನ ತಪ್ಪದೇ ಈ ಸುದ್ದಿ ನೋಡಿ.
ಟ್ರಾಫಿಕ್ ಪೊಲೀಸರ ಕ್ಯಾಮರಾ ನಿಮ್ಮ ವಾಹನದ ವೇಗದ ಮೇಲೆ ಕಣ್ಣಿಟ್ಟಿದೆ. ಸಂಚಾರ ನಿಯಮ ಕೊಂಚ ಉಲ್ಲಂಘನೆಯಾದ್ರೂ ದಂಡ ಬೀಳಲಿದೆ. ಮೈಸೂರು ಮತ್ತು ಬೆಂಗಳೂರು ರಾ.ಹೆದ್ದಾರಿಗೆ ಎಎನ್ ಪಿ ಆರ್ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು, ಅಪಘಾತ ನಿಯಂತ್ರಣಕ್ಕೆ ಎನ್ ಪಿ ಆರ್ ಕ್ಯಾಮರಾ ಅಳವಡಿಕೆ ಮಾಡಲಾಗುತ್ತಿದೆ.
ಅತಿವೇಗದ ಚಾಲನೆ ಮತ್ತು ಒನ್ ವೇ ವಾಹನ ಚಲಾಯಿಸಿದ್ರೆ ದಂಡ ಬೀಳುತ್ತೆ. ಸದ್ಯ ಬೆಂಗಳೂರು ಸಂಚಾರ ಪೊಲೀಸರು ಎಎನ್ ಪಿಆರ್ ಕ್ಯಾಮರಾ ಬಳಸಿ ದಂಡ ವಿಧಿಸುತ್ತಿದೆ.
ಮೈಸೂರು ಮತ್ತು ಬೆಂಗಳೂರು ರಾ.ಹೆದ್ದಾರಿಯಲ್ಲಿ ಹೆಚ್ಚಾಗುತ್ತಿರುವ ಅಪಘಾತಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ, ಹೀಗಾಗಿ ಎಎನ್ ಪಿಆರ್ ಕ್ಯಾಮರಾ ಬಳಸಲು ನಿರ್ಧಾರ ಮಾಡಲಾಗಿದೆ.
ರಾಜ್ಯ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಆದೇಶದ ಮೇರೆಗೆ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಕ್ಯಾಮರಾ ಅಳವಡಿಕೆ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.