ಹಾವೇರಿ: ಜುಲೈ 18 ರ ನಂತರ ವಿಪಕ್ಷ ನಾಯಕನ ಆಯ್ಕೆಯನ್ನ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಶಿಗ್ಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹತ್ತು ವರ್ಷದಿಂದ ಬಿಸಿಯುಟ ಕಾರ್ಯಕ್ರಮ ನಡೆಯುತ್ತಿದೆ. ಮಹಿಳೆಯರು ಬಳೆ ಹಾಕಿಕೊಂಡು ಕೇಲಸ ಮಾಡಿದ್ದಾರೆ ಯಾವುದೇ ತೊಂದರೆ ಆಗಿಲ್ಲ ಆದ್ರೆ ಈಗ ಯಾಕೆ ಹೊಸ ಸುತ್ತೋಲೆ,
ಸರಕಾರಕ್ಕೆ ಮಾಡಲು ಬೇರೆ ಕೇಲಸ ಇಲ್ವಾ? ಎಂದು ಕಿಡಿಕಾರಿದ್ದಾರೆ. ಪ್ರತಿಪಕ್ಷಗಳಿಗೆ ಸ್ವತಂತ್ರವಾಗಿ ಚುನಾವಣೆ ಎದುರಿಸುವ ಶಕ್ತಿ ಇಲ್ಲಾ. ಬೆಂಗಳೂರಿನಲ್ಲಿ ನಡೆಯುವ ಸಬೆಗೆ ಯಾವುದೇ ಮಹತ್ವ ಇಲ್ಲ, ಕೇವಲ ಮೋದಿಯವರನ್ನ ಸೋಲಿಸಬೇಕು ಎನ್ನುದು ಇವರ ಉದ್ದೇಶ ಎಂದು ಹೇಳಿದರು. ವರ್ಗಾವಣೆ ದಂದೆ ಬಗ್ಗೆ ಅಧಿವೇಶನದಲ್ಲಿ ಪ್ರಶ್ನೆ ಮಾಡಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.