ಬೆಂಗಳೂರು: ಐದು ಗ್ಯಾರೆಂಟಿಗಳನ್ನ ಜಾರಿಗೊಳಿಸಲ್ಲ ಅಂತ ಬಿಜೆಪಿ ವ್ಯಂಗ್ಯ ಮಾಡಿತ್ತು. ದುಡ್ಡು ಎಲ್ಲಿಂದ ತರ್ತಾರೆ ಅಂತ ಕೇಳುತ್ತಿದ್ದರು. ನಾವು ವಾಣಿಜ್ಯ ತೆರಿಗೆ, ಮದ್ಯದ ದರವನ್ನ ಹೆಚ್ಚಿಸಿದ್ದೇವೆ. ಇದರಿಂದ 13,500 ಕೋಟಿ ಬರುತ್ತೆ, 8 ಸಾವಿರ ಕೋಟಿ ಸಾಲ ಮಾಡುತ್ತೇವೆ. ನನ್ನ ರಾಜಕೀಯ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ 12520 ಕೋಟಿ ರೆವಿನ್ಯೂ ಡೆಪಿಸಿಟ್ ಬಜೆಟ್ ಮಂಡಿಸಿದ್ದೇನೆ. ಮುಂದೆ ಸರ್ಪ್ಲೆಸ್ ಬಜೆಟ್ ಮಂಡಿಸುವ ವಿಶ್ವಾಸ ಇದೆ ಎಂದರು.
ಹಿಟ್ಲರ್ ಒಬ್ಬ ಮತಾಂಧ, ನೀವು ಅವನ ಪರ ಇದ್ದೀರಾ? ಎಂದು ವಿಪಕ್ಷ ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಅಕ್ಕಿ, ರಾಗಿ, ಹಾಲು, ಮೊಸರು, ಪೆನ್ನು ಪೇಪರ್ ಮೇಲೆ ಜಿಎಸ್ಟಿ ಹಾಕಿದ್ದೀರಿ. ಬಿಜೆಪಿಯವರು GST ಹಾಕಿ ಜನರಿಂದ ಹಣ ಕಿತ್ತುಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜನರ ಕೈಯಲ್ಲಿ ಹಣ ಇರಲಿಲ್ಲ. ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತೆ ಅಂತಾ ಮೋದಿ ಹೇಳಿದ್ದಾರೆ. ಐದು ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಆಗುವುದಕ್ಕೆ ಬಿಡುವುದಿಲ್ಲ. ಪ್ರಮಾಣವಚನ ತೆಗೆದುಕೊಂಡು ನೇರ ವಿಧಾನಸೌಧಕ್ಕೆ ಹೋಗಿದ್ದೆ. ಮೊದಲು ಎಲ್ಲಾ ಗ್ಯಾರಂಟಿಗೆ ತಾತ್ವಿಕ ಒಪ್ಪಿಗೆ ಕೊಟ್ಟಿದ್ದೆವು. 2ನೇ ಸಂಪುಟ ಸಭೆಯಲ್ಲಿ ಯೋಜನೆ ಜಾರಿ ಘೋಷಣೆ ಮಾಡಿದ್ದೇವೆ. ಎಲ್ಲಿಂದ ಹಣ ಬರುತ್ತೆ, ಹೇಗೆ ಹೊಂದಿಸುತ್ತಾರೆಂದು ಟೀಕೆ ಮಾಡಿದರು. ಅದೆಲ್ಲವನ್ನೂ ಬಜೆಟ್ ಮೇಲಿನ ಭಾಷಣದಲ್ಲಿ ಹೇಳುತ್ತೇನೆ ಎಂದರು.