ಬೆಂಗಳೂರು: ಗೃಹಲಕ್ಷ್ಮೀ ಆ್ಯಪ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಎಂಬ ಸತೀಶ್ ಜಾರಕಿಹೊಳಿ ಆರೋಪಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಏನ್ ಹೇಳಿದ್ದಾರೆ ಗೊತ್ತಾ ಇಲ್ಲಿದೆ ನೋಡಿ!
ಈ ವಿಚಾರದ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಯಾವುದೇ ಸಂದರ್ಭದಲ್ಲಿ ಸಮೇತ ಹೆಚ್ಚು ಬೇಡಿಕೆಗಳು ಬಂದಾಗ ಈ ರೀತಿಯಾದ ಸಮಸ್ಯೆಗಳು ಎದರಾಗುತ್ತವೆ. ತುಂಬಾ ಜನ ಒಂದೇ ಸಲ ಹೋಗಿ ಅರ್ಜಿ ಸಲ್ಲಿಕೆ ಮಾಡಿದಾಗ ಈ ರೀತಿಯಾಗುತ್ತದೆ ಎಂದರು.
ಒಂದೇ ಸಲ ಹೆಚ್ಚು ಜನ ನೋಂದಣಿ ಮಾಡುತ್ತಿರುವುದರಿಂದ ಸರ್ವರ್ ಪ್ರಾಬ್ಲಮ್ ಆಗುವುದು ಸಹಜ. ಗೃಹಜ್ಯೋತಿ (Gruhajyothi) ನೋಂದಣಿಗೆ ನಾವು ಡೆಡ್ಲೈನ್ ಕೊಡಲಿಲ್ಲ. ಈ ಸಮಸ್ಯೆ ಆದಷ್ಟು ಬೇಗ ಬಗೆಹರಿಯುತ್ತದೆ. ಇದಕ್ಕೆ ಟೋಕನ್ ಸಿಸ್ಟಮ್ ಜಾರಿ ಮಾಡುವಂತೆ ಸೂಚನೆ ನೀಡಿದ್ದೇವೆ ಎಂದರು