ವಿಧಾನಸಭೆ: ಶೂನ್ಯವೇಳೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಟ್ಟಿಗೆದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನನ್ನ ಉಚ್ಛಾಟನೆ ಮಾಡುತ್ತೇನೆ ಅಂತಾ ಹೇಳೋಕೆ ಇವರು ಯಾರು? ನಮ್ಮ ಪಕ್ಷದವರಲ್ಲ. ನಾನೇನು ಅವರ ಪಕ್ಷದಲ್ಲಿದ್ದೀನಾ? ಎಂದರು. ಗದ್ದಲದ ಮಧ್ಯೆ ಬೊಮ್ಮಾಯಿಯವರನ್ನು ಪದೇ ಪದೇ ಪ್ರತಿಪಕ್ಷ ನಾಯಕರೇ ಎಂದು ಕರೆದ ಸ್ಪೀಕರ್ ಖಾದರ್, ಕೊನೆಗೆ ಪ್ರತಿಪಕ್ಷ ನಾಯಕರಾಗಿಲ್ಲ ಎಂದ ಹೇಳಿದರು.
ವಿಜಯಪುರ ಮಹಾನಗರ ಪಾಲಿಗೆ ಆಯುಕ್ತರ ವರ್ಗಾವಣೆ ವಿಚಾರವಾಗಿ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಎತ್ತಿದ ಆಕ್ಷೇಪ ವಿಧಾನಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವಿನ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು.
ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಸಚಿವ ಬೈರತಿ ಸುರೇಶ್ ತೀವ್ರ ವಿರೋಧ ವ್ಯಕ್ತಪಡಿಸಿದರು. ನೀವು ವ್ಯಾಪಾರ ಮಾಡಿದ್ದೀರಿ, ನಾವು ಮಾಡಿಲ್ಲ ಎಂದರೆ ಹೇಗೆ? ನೀವು ಮಾತ್ರ ಸತ್ಯ ಹರಿಶ್ಚಂದ್ರರು ಅಂತಾನಾ? ಸುಮ್ಮನೆ ಏನೋ ಹೇಳ್ತಿರಲ್ವಾ? ಎಂದು ತಿರುಗೇಟು ನೀಡಿದರು.