ಬೆಂಗಳೂರು:- ದೂರದ ಊರಿನಿಂದ ಸಿಲಿಕಾನ್ ಸಿಟಿಗೆ ಬರೋ ಹೆಣ್ಣುಮಕ್ಕಳೇ ಈ ಸ್ಟೋರಿ ನೋಡ್ಲೇ ಬೇಕು. ಹಿಂದೆ ಮುಂದೆ ನೋಡದೆ ಪಿಜಿ ಮಾಡಿದ್ರೆ ನಿಮ್ಮ ಮಾನಕ್ಕೆ ಕುತ್ತು ಬರೋದು ಗ್ಯಾರಂಟಿ… ಏನಿದು ಸ್ಟೋರಿ ಎಂದು ತಿಳಿಯಲು ಸುದ್ದಿ ಪೂರ್ತಿ ಓದಿ..
ಹೌದು, ದೂರದ ಊರಿಂದ ಕೆಲಸ ಹರಸಿ ಸಾಕಷ್ಟು ಹೆಣ್ಣು ಮಕ್ಕಳು ಸಿಟಿಯತ್ತ ಮುಖ ಮಾಡುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡವರು ನೀಚ ಕೃತ್ಯ ಎಸಗುತ್ತಾರೆ. ಎಸ್ ನಾವು ಇದೀಗ ಹೇಳಲು ಹೊರಟಿರೋದು ಅಂತದ್ದೇ ಸ್ಟೋರಿ.
ಪಿಜಿ ಬೇಡ ಅಂತ ಕ್ಯಾನ್ಸಲ್ ಮಾಡಿದ್ದಕ್ಕೆ ಯುವತಿಯ ಫೋನ್ ನಂಬರ್ ಅನ್ನು ಪಿಜಿ ಮ್ಯಾನೇಜರ್ ಕಾಲ್ ಗರ್ಲ್ ವೆಬ್ ಸೈಟ್ ನಲ್ಲಿ ಹರಿಬಿಟ್ಟಿದ್ದಾನೆ. ಶೇಷಾದ್ರಿಪುರದಲ್ಲಿರೋ ವಿ ಸ್ಟೇಜ್ ಲೇಡಿಸ್ ಪಿಜಿ ಇದಾಗಿದ್ದು, ಮ್ಯಾನೇಜರ್ ಆನಂದ್ ಶರ್ಮಾ ದುಷ್ಕೃತ್ಯಕ್ಕೆ ಯುವತಿ ಬೆಚ್ಚಿ ಬಿದ್ದಿದ್ದಾಳೆ.
ಯುವತಿ ವಿ ಸ್ಟೇಜ್ ಪಿಜಿಗೆ ಅಡ್ಮಿಶನ್ ಆಗಿದ್ದಾಳೆ. ಪಿಜಿ ಇಷ್ಟ ಆಗಿಲ್ಲ ಅಂತ ಪಿಜಿ ಆಡ್ಮಿಶನ್ ಕ್ಯಾನ್ಸಲ್ ಮಾಡಿದ್ದಾಳೆ. ಗೂಗಲ್ ರಿವ್ಯೂ ನಲ್ಲಿ ಪಿಜಿ ಅವ್ಯವಸ್ಥೆ ಬಗ್ಗೆ ಯುವತಿ ಬರೆದಿದ್ದಾಳೆ. ಇದಕ್ಕೆ ಮ್ಯಾನೇಜರ್ ಕುಪಿತಗೊಂಡು ಈ ರೀತಿ ಮಾಡಿದ್ದಾರೆ. ಗೂಗಲ್ ರಿವ್ಯೂ ಕಾಮೆಂಟ್ ನಲ್ಲೆ ಯುವತಿಗೆ ನಿಂದಿಸಿದ್ದಾನೆ.
ಲೊಕೆಂಟೋ ಸೇರಿದಂತೆ ಕೆಲ ಕಾಲ್ ಗರ್ಲ್ ವೆಬ್ ಸೈಟ್ ನಲ್ಲಿ ಯುವತಿ ನಂಬರ್ ಅಪ್ಲೋಡ್ ಮಾಡಿದ್ದಾರೆ. ಯುವತಿಯನ್ನ ಕಾಲ್ ಗರ್ಲ್ ನಂತೆ ಬಿಂಬಿಸಿದ್ದಾನೆ.ಯುವತಿ ನಂಬರ್ ಗೆ ಅನೇಕರು ಕರೆ ಮಾಡಿ ರೇಟ್ ಎಷ್ಟು..?ರೂಮ್ ಗೆ ಬಾ ಅಂತೆಲ್ಲ ಕರೆ ಮಾಡಿ ಟಾರ್ಚರ್ ನೀಡಿದ್ದಾರೆ. ಯುವತಿ ಪೂರ್ವ ವಿಭಾಗ ಸೆನ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾಳೆ. ಪೊಲೀಸ್ರು ತನಿಖೆ ನಡೆಸಿದಾಗ
ಆರೋಪಿಯ ಕೃತ್ಯ ಬಯಲಿಗೆ ಬಂದಿದೆ.
ಲೊಕೆಂಟೋ ವೆಬ್ ಸೈಟ್ ನಲ್ಲಿ ಪಿಜಿ ಮ್ಯಾನೇಜರ್ ನಂಬರ್ ಹಾಕಿರೋದು ಪತ್ತೆಯಾಗಿದೆ. ಪೊಲೀಸ್ರು ಪಿಜಿ ಮ್ಯಾನೇಜರ್ ಆನಂದ್ ಶರ್ಮಾನನ್ನ ಬಂಧಿಸಿದ್ದಾರೆ.