ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ.ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೆಚ್ಡಿಕೆ ಹಾಗೂ ಡಿಕೆ ಬದ್ರರ್ಸ್ ನಡುವೆ ಶೀತಲ ಸಮರ ಜೋರಾಗಿದೆ. ಹೆಚ್ಡಿಕೆ ಗೆ ಬಿಗ್ ಶಾಕ್ ನೀಡಿರುವ ಕನಕಪುರ ಬಂಡೆ ಮಿಡ್ ನೈಟ್ ಆಪರೇಷನ್ ಮಾಡಿದ್ದಾರೆ. ನಿಮ್ಮ ಡ್ರಾಮಾ ಬಿಡಿ ಡೂಪ್ಲಿಕೇಟ್ ಸಿಎಂ ಎಂದು ದಳಪತಿಗಳು ಕಿಡಿಕಾರಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ
ಯೆಸ್,ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಸೋಲಿಸಲು ಕಮಲದಳ ನಾಯಕರು ರಣಕಹಳೆ ಮೊಳಗಿಸಿದ್ದಾರೆ.ಬೆಂಗಳೂರು ಗ್ರಾಮಾಂತರದಿಂದಲೇ ಕಮಲದಳ ವಿಜಯಪಾತಕೆ ಹಾರಿಸಲು ದೆಹಲಿ ದೊರೆಗಳು ಘೋಷಣೆ ಮಾಡಿದ್ದಾರೆ.ಈ ಹಿನ್ನಲೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಜಂಟಿಯಾಗಿ ಪ್ರಚಾರ ಮಾಡುತ್ತಿದ್ದು,ಡಿಕೆ ಬ್ರದರ್ಸ್ ಗೆ ಟಕ್ಕರ್ ಕೊಡುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನ ಪ್ರತಿಷ್ಠೆಯಾಗಿ ತೆಗದುಕೊಂಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್,ಸಹೋದರನನ್ನ ಗೆಲ್ಲಿಸಲು ಕಾಲಿಗೆ ಚಕ್ರಕಟ್ಟಿಕೊಂಡಂತೆ ತಿರುಗಾಡುತ್ತಿದ್ದಾರೆ. ಇಡೀ ದಿನ ಬೆಂಗಳೂರು ಗ್ರಾಮಾಂತರದಲ್ಲಿ ಪ್ರಚಾರ ಮಾಡಿದ್ದ ಡಿಕೆಶಿ,ಮಧ್ಯ ರಾತ್ರಿ 12 ಗಂಟೆಯಲ್ಲಿ ಆಪರೇಷನ್ ಹಸ್ತ ಮಾಡಿದ್ದಾರೆ.ಚನ್ನಪಟ್ಟಣದಲ್ಲಿ ಹೆಚ್ಡಿಕೆ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ 300ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.ಮಿಡ್ ನೈಟ್ ಆಪರೇಷನ್ ಮಾಡುವ ಮೂಲಕ ಹೆಚ್ಡಿಕೆಗೆ,ಡಿಕೆಶಿ ಕೌಂಟರ್ ಕೊಟ್ಟಿದ್ದಾರೆ.
ಇನ್ನು ತಮ್ಮನನ್ನ ಗೆಲ್ಲಿಸಿಕೊಳ್ಳಲು ಪಣ ತೊಟ್ಟಿರುವ ಟ್ರಬಲ್ ಶೂಟರ್,ಜೆಡಿಎಸ್ ಕಾರ್ಯಕರ್ತರಿಗೆ ಗಾಳ ಹಾಕಿದ್ದಾರೆ.ರಾಮನಗರ,ಚನ್ನಪಟ್ಟಣ,ಕುಣಿಗಲ್,ಮಾಗಡಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರನ್ನ ಡಿಕೆ ಸಂಪರ್ಕ ಮಾಡುತ್ತಿದ್ದಾರೆ.ಅಲ್ದೇ ಬಹಿರಂಗವಾಗಿ ಆಹ್ವಾನ ನೀಡಿರುವ ಡಿಕೆಶಿ,ಈಗಲೂ ಕಾಲ ಮಿಂಚಿಲ್ಲ.ಆದಷ್ಟು ಬೇಗ ಪಕ್ಷಕ್ಕೆ ಬನ್ನಿ.ಲೋಕಸಭೆ ಚುನಾವಣೆ ಆದ್ಮೇಲೆ ಬಿಜೆಪಿ ಜೊತೆ ಜೆಡಿಎಸ್ ಪಕ್ಷ ವಿಲೀನವಾಗುತ್ತೆ.ಈಗಲೇ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಡಿಕೆಶಿ ಆಹ್ವಾನ ಮಾಡಿದ್ದಾರೆ.
ಡಿಕೆಶಿ ಮಿಡ್ ನೈಟ್ ಆಪರೇಷನ್ ಗೆ ಜೆಡಿಎಸ್ ವ್ಯಂಗ್ಯ ಮಾಡಿದೆ.ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಶಾಲು ಹಾಕಿ ಬರಮಾಡಿಕೊಂಡು,ಜೆಡಿಎಸ್ ಕಾರ್ಯಕರ್ತರು ಎಂದು ಬಿಂಬಿಸಲಾಗುತ್ತಿದೆ.ಸೋಲಿನ ಭೀತಿ,ಹತಾಶೆಯಿಂದ ಈ ರೀತಿಯ ಗಿಮಿಕ್ ಮಾಡುತ್ತಿದ್ದಾರೆ. ಡೂಪ್ಲಿಕೇಟ್ ಸಿಎಂ ಎಂದು ಜೆಡಿಎಸ್ ಟ್ವೀಟ್ ಮಾಡಿ ವ್ಯಂಗ್ಯ ಮಾಡಿದೆ. ಒಟ್ಟಾರೆ,ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ,ಕಮಲದಳ ಹಾಗೂ ಡಿಕೆ ಬ್ರದರ್ಸ್ ಗೆ ಪ್ರತಿಷ್ಠೆಯ ಕಣವಾಗಿದೆ.ತಮ್ಮನನ್ನ ಗೆಲ್ಲಿಸಲು ಪಣ ತೊಟ್ಟಿರುವ ಡಿಕೆಶಿ, ಜೆಡಿಎಸ್ ಬುಟ್ಟಿಗೆ ಕೈ ಹಾಕಿ, ಮಿಡ್ ನೈಟ್ ಆಪರೇಷನ್ ಮಾಡಿದ್ದಾರೆ.