ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜೈಲು ಸೇರಿ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಇದ್ದ ಅವರು ಸದ್ಯ ಬಳ್ಳಾರಿ ಶಿಫ್ಟ್ ಆಗಿದ್ದಾರೆ. ಅಲ್ಲಿ ಅವರಿಗೆ ಸಾಕಷ್ಟು ತೊಂದರೆಗಳು ಎದುರಾಗುತ್ತಿವೆ. ಬೆನ್ನು ನೋವು ಇರುವುದರಿಂದ ದರ್ಶನ್ ತೊಂದರೆ ಅನುಭವಿಸುತ್ತಾ ಇದ್ದಾರೆ..
ಇದರ ಬೆನ್ನಲ್ಲೇ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್ರನ್ನು ವಕೀಲ ಸುನೀಲ್ ಇಂದು ಭೇಟಿ ಮಾಡಿದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿ, ಹೊಸ ಮ್ಯಾನುವಲ್ ಪ್ರಕಾರ ಸೌಲಭ್ಯ ನೀಡಲು ಜೈಲಾಧಿಕಾರಿಗೆ ಮನವಿ ಮಾಡಲಾಗಿದೆ. ಎರಡು ದಿನದಲ್ಲಿ ಮೂಲ ಸೌಲಭ್ಯ ನೀಡದಿದ್ದರೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡುತ್ತೇವೆ.
ಹೊಸ ಮ್ಯಾನುವಲ್ ಪ್ರಕಾರ ಮೆಡಿಕಲ್ ಬೆಡ್ ಮತ್ತು ದಿಂಬು ಕೊಡಲು ಅವಕಾಶ ಇದೆ. ನ್ಯಾಯಾಲಯದಿಂದ ಬಂದಿರುವ ಆದೇಶದ ಬಗ್ಗೆ ಜೈಲ್ ಅಧಿಕಾರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೂ ಸೌಲಭ್ಯ ನೀಡದೇ ಇದ್ದರೇ ದೂರು ಕೊಡುತ್ತೇವೆ ಎಂದರು.