ಖಡ್ಗಕ್ಕಿಂತ ಲೇಖನಿ ಹರಿತ ಎನ್ನುವುದನ್ನು ಸಾಬೀತು ಪಡಿಸುವ ಏಕೈಕ ವ್ಯಕ್ತಿ ಪತ್ರಕರ್ತ ,ಪತ್ರಕರ್ತರು ಯಾವುದೇ ಆಸೆ,ಆಕಾಂಕ್ಷೆಗಳಿಗೆ ಒಳಗಾಗದೆ ಸತ್ಯ,ನ್ಯಾಯ,ನಿಷ್ಠೆಯ ಪರನಾಗಿ ಕೆಲಸ ಮಾಡಬೇಕು ಎಂದು ಪ್ರಸ್ ಕ್ಲಬ್ ಕೌನ್ಸಿಲ್ ನ ಜಿಲ್ಲಾಧ್ಯಕ್ಷ ಸಿದ್ದರಾಮಪ್ಪ ಸಿರಿಗೇರಿ ತಿಳಿಸಿದರು. ಅವರು ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಕರ್ನಾಟಕ ಪ್ರಸ್ ಕ್ಲಬ್ ಕೌನ್ಸಿಲ್ ವತಿಯಿಂದ ಶನಿವಾರ ಆಯೋಜಿಸಿದ್ದ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ ಕ್ಲಬ್ ಕೌನ್ಸಿಲ್ ತನ್ನದೇ ಆದ ನೀತಿ ನಿಯಮಗಳನ್ನು ಒಳಗೊಂಡಿದ್ದು ಅದರ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಬೇಕು. ಕರೋನಾ ದಂತಹ ಮಹಾಮಾರಿ ಸಂದರ್ಭದಲ್ಲಿಯೂ ನಾವು ಮುಂಚೂಣಿಯಲ್ಲಿ ನಿಂತು ವರದಿ ಮಾಡಿದ್ದೇವೆ. ಸರ್ಕಾರ ನಮಗೆ ಯಾವುದೇ ಸೌಲಭ್ಯಗಳನ್ನು ನೀಡದಿರುವುದು ದುರಾದೃಷ್ಟಕರ ಎಂದರು.
ನಂತರ ಪ್ರಸ್ ಕ್ಲಬ್ ಕೌನ್ಸಿಲ್ ನ ಜಿಲ್ಲಾ ಉಪಾಧ್ಯಕ್ಷ ಕೆ.ವೀರಭದ್ರಗೌಡ ಮಾತನಾಡಿ, ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕೋದ್ಯಮ ಜನರ ಕಷ್ಟ ನಷ್ಟಗಳಿಗೆ ಧ್ವನಿಯಾಗಿ ಶೋಷಿತರ ಪರ ನಿಲ್ಲಬೇಕಿದೆ. ಭ್ರಷ್ಟಾಚಾರ ಮುಕ್ತ ಪತ್ರಕರ್ತರಾಗಿ,ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಂಪ್ಲಿ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಹೆಚ್.ಮರಿಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಟಿ. ಹೆಚ್. ಎಂ.ರಾಜ್ ಕುಮಾರ್, ಗೌರವಾಧ್ಯಕ್ಷರಾಗಿ ಸಚ್ಚಿದಾನಂದ ಹಿರೇಮಠ್, ಉಪಾಧ್ಯಕ್ಷರಾಗಿ ಹೇಮಂತ್ ,ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಂಬಣ್ಣ,ಬಸವರಾಜ್,ವೀರೇಶ, ಗೋಪಿನಾಥ್,ವಿನಾಯಕ್ ರವರನ್ನು ಆಯ್ಕೆ ಮಾಡಲಾಯಿತು. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಗಳಿಗೆ ಆದೇಶ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಕುರುಗೋಡು ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಬಸವರಾಜ್, ಶಿಕ್ಷಕ ನಾಗಪ್ಪ, ಅಣ್ಣಯ್ಯ ಸ್ವಾಮಿ, ರಾಘವೇಂದ್ರ. ಕೆ ಸಿ.ಮಹೇಶ್ ಕುಮಾರ್, ಹಾಗೂ ಇತರರು ಉಪಸ್ಥಿತರಿದ್ದರು.