ಬೆಂಗಳೂರು: ಕಾಂಪೌಂಡ್ ಗೋಡೆ ಕುಸಿದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಮತ್ತೋರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿದ್ದು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದ್ದು ರಾಯಚೂರಿನ ದೇವದುರ್ಗ ಮೂಲದ ಪರಶುರಾಮ್(24)ಮೃತ ಕಾರ್ಮಿಕನಾಗಿದ್ದು ಪೈಪ್ ಲೈನ್ ಹಾಕಲು ಮಣ್ಣು ತೆಗೆಯುತ್ತಿದ್ದ ವೇಳೆ ಕುಸಿದ ಕಾಂಪೌಂಡ್ ಗೋಡೆ
ಕಾಂಪೌಂಡ್ ಗೋಡೆ ಪಕ್ಕದಲ್ಲಿಯೇ ಗುಂಡಿ ತೆಗೆಯುತ್ತಿದ್ದ ವೇಳೆ ಅವಘಡ ರಾಯಚೂರು ಮೂಲದ ಐದಾರು ಮಂದಿ ಮಣ್ಣು ಕೆಲಸ ಮಾಡುತ್ತಿದ್ದರು ಈ ವೇಳೆ ಏಕಾಏಕಿ ಕಾರ್ಮಿಕ ಮೇಲೆಯೇ ಕುಸಿದ ಗೋಡೆ ಹೊಟ್ಟೆಪಾಡಿಗೆ ದೂರದ ರಾಯಚೂರಿನಿಂದ ಬಂದಿದ್ದ ಕಾರ್ಮಿಕ ಸಾವು
ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.