ಬೆಂಗಳೂರು: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ರವರ ನಿರ್ಲಕ್ಷತನದ ವಿರುದ್ಧ ಪ್ರತಿಭಟನೆ ನಡೆಸಿ ಕೂಡಲೇ ನೈತಿಕ ಹೊಣೆ ಹೊತ್ತು ಪ್ರಧಾನಿ ಮೋದಿ ಅವರು ರಾಜೀನಾಮೆ ನೀಡಿ ತೊಲಗಬೇಕೆಂದು ಆಗ್ರಹಿಸಿದರು.
ಸುಮಾರು 77 ದಿನಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಗಲಭೆಯನ್ನು ನಿಯಂತ್ರಿಸಲು ಸಾಧ್ಯವಾಗದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಗಲಭೆ ನಡೆಯುತ್ತಿರುವ ಮಣಿಪುರಕ್ಕೆ ಭೇಟಿ ನೀಡಿ ಶಾಂತ ರೀತಿಯ ವಾತಾವರಣ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ರವರು ವಿಫಲವಾಗಿದ್ದಾರೆ.
ಮಹಿಳೆಯರನ್ನ ಬೆತ್ತಲೆ ಗೊಳಿಸುವ ಹೀನಾಯ ಕೃತ್ಯಗಳು ನಡೆಯುತ್ತಿದ್ದರು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಮೌನಕ್ಕೆ ಶರಣಾಗಿರುವುದು ದೇಶದ ದುರಂತ.
ಮಹಿಳೆಯರ ಹೆಸರಿನಲ್ಲಿ ರಾಜಕೀಯ ಲಾಭ ಪಡೆದ ನರೇಂದ್ರ ಮೋದಿ ಭೇಟಿ ಬಚಾವೋ ಭೇಟಿ ಪಡವೋ ಎಂಬುವ ಘೋಷಣೆ ಕೂಗಿ ಇಂದು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕಣ್ಣಾರೆ ಕಂಡರೂ ಕಾಣದ ರೀತಿ ವರ್ತಿಸುತ್ತಿದ್ದಾರೆ
ಇಂತಹ ಹೀನಾಯ ಸ್ಥಿತಿಗೆ ಭಾರತ ತಲುಪಿದರು ವಿದೇಶ ಸುತ್ತಿ ನಿದ್ರಿಸಿ ಪ್ರಚಾರ ಪಡೆಯುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿರವರು ಎಂದು ಗುಡುಗಿದರು.
ಕೇವಲ ಅಧಿಕಾರಕ್ಕಾಗಿ ಬರಬೇಕು ಅಧಿಕಾರದಲ್ಲಿ ಮುಂದುವರಿಯಬೇಕು ಎಂಬುವ ಕಡೆ ಗಮನ ನೀಡುವ ನರೇಂದ್ರ ಮೋದಿ ರವರು ವಿರೋಧ ಪಕ್ಷವನ್ನ ಟೀಕಿಸಿ ತನ್ನ ಆಡಳಿತದಲ್ಲಿ ನಡೆಯುತ್ತಿರುವ ಇಂತಹ ಹೀನಾಯ ಕೃತ್ಯಗಳ ಬಗ್ಗೆ ಕಣ್ಣಿಟ್ಟು ನೋಡದೆ ಇರುವುದು ನರೇಂದ್ರ ಮೋದಿಯ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ.
ಮಣಿಪುರದಲ್ಲಿ ನಡೆಯುತ್ತಿರುವ ಗಲಭೆಯನ್ನು ಹಾಗೂ ಮಹಿಳೆಯರ ಮೇಲಿ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ಕೇಂದ್ರ ಹಾಗೂ ಮಣಿಪುರ ಬಿಜೆಪಿ ಸರ್ಕಾರ ವಿಫಲವಾಗಿರುವುದನ್ನ ಸರ್ವೋಚ್ಚ ನ್ಯಾಯಾಲಯ ಇಂದು ಗಮನಿಸಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವುದು ನರೇಂದ್ರ ಮೋದಿಯ ದುರಾಡಳಿತಕ್ಕೆ ಹಿಡಿದ ಕೈಗಡಿಯಾಗಿದೆ.
ಮಣಿಪುರದ ಗಲಭೆಗಳನ್ನು ತಡೆಯಲು ನರೇಂದ್ರ ಮೋದಿ ರವರೇ ನೀವು ಸಂಪೂರ್ಣವಾಗಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತೊಲಗಬೇಕೆಂದು ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಲಾಯಿತು.
ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಅತ್ಯಂತ ಕಠಿಣ ಶಬ್ದಗಳಲ್ಲಿ ಖಂಡಿಸಿ ಇಂತಹ ಹೀನಾಯ ಕೃತ್ಯದಲ್ಲಿ ಭಾಗಿಯಾಗಿರುವ ಕೀಡಿಗೇಡಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಇದೇ ಸಂದರ್ಭದಲ್ಲಿ ಆಗ್ರಪಡಿಸಲಾಯಿತು.
ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಮನೋಹರ್ ಕಾಂಗ್ರೆಸ್ ಪಕ್ಷದ ಮುಖಂಡರಾದ ಎ.ಆನಂದ್ ಜಿ.ಜನಾರ್ದನ್,ಈ.ಶೇಖರ್, ಎಲ್. ಜಯಸಿಂಹ ಪ್ರಕಾಶ್ ಜಿ, ಹೇಮರಾಜು, ಪರಿಸರ ರಾಮಕೃಷ್ಣ, ಚಂದ್ರಶೇಖರ್, ಪುಟ್ಟರಾಜು, ಕೆ ಟಿ ನವೀನ್, ಉಮೇಶ್, ಮುತ್ತುರಾಜ್, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಭಾಗವಹಿಸಿದ್ದರು.