ಪಾಕಿಸ್ತಾನ: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದ ಬಳಿಕ ಪಾಕಿಸ್ತಾನದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಇಮ್ರಾನ್ ಖಾನ್ ಬಂಧನವನ್ನು ವಿರೋಧಿಸಿ ದೇಶದ ವಿವಿಧ ರಸ್ತೆಗಳಲ್ಲಿ ವಾಹನಗಳು, ಕಟ್ಟಡಗಳು ಮತ್ತು ಕೆಲಸದ ಸ್ಥಳಗಳಿಗೆ ಬೆಂಕಿ ಹಚ್ಚಲಾಗುತ್ತಿದ್ದು ಇದೀಗ ಸರ್ಕಾರದ ವಿರುದ್ಧ 6 ಸೇನಾ ಅಧಿಕಾರಿಗಳು ತಿರುಗಿ ಬಿದಿದ್ದಾರೆ.
ಇಮ್ರಾನ್ ಅವರ ಪಕ್ಷದ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರು ನಿರಂತರವಾಗಿ ಬೀದಿಗಳನ್ನು ಧ್ವಂಸ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ಪಾಕಿಸ್ತಾನದ ಸೇನೆಯಲ್ಲೂ ಉಗ್ರ ಬಂಡಾಯ ಭುಗಿಲೆದ್ದಿದೆ. ಆರು ಹಿರಿಯ ಸೇನಾ ಅಧಿಕಾರಿಗಳು ಪಾಕಿಸ್ತಾನಿ ಸೇನಾ ಮುಖ್ಯಸ್ಥ ಮತ್ತು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಪಾಕಿಸ್ತಾನ ಸೇನೆಯ ನಿವೃತ್ತ ಅಧಿಕಾರಿಯೊಬ್ಬರು ಈ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನ ಸೇನೆಯ ಮೇಜರ್ ಆದಿಲ್ ರಾಜಾ (ನಿವೃತ್ತ) ಟ್ವೀಟ್ನಲ್ಲಿ ಸೇನೆಯ ಆರು ಲೆಫ್ಟಿನೆಂಟ್ ಜನರಲ್ಗಳು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಸರ್ಕಾರ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್ಮೆಂಟ್ (PDM) ಅನ್ನು ಸಾರ್ವಜನಿಕವಾಗಿ ವಿರೋಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ವರದಿಯ ಪ್ರಕಾರ, ಪಾಕಿಸ್ತಾನ ಸೇನೆಯ ಆಸಿಫ್ ಗಫೂರ್, ಅಸಿಮ್ ಮಲಿಕ್, ನೌಮನ್ ಜಕಾರಿಯಾ, ಸಾಕಿಬ್ ಮಲಿಕ್, ಸಲ್ಮಾನ್ ಘನಿ ಮತ್ತು ಸರ್ದಾರ್ ಹಸನ್ ಅಜರ್ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಪಿಡಿಎಂ ಅನ್ನು ಬಹಿರಂಗವಾಗಿ ವಿರೋಧಿಸುತ್ತಾರೆ. ಮುಂದಿನ 48 ರಿಂದ 72 ಗಂಟೆಗಳು ಪಾಕಿಸ್ತಾನಕ್ಕೆ ಅತ್ಯಂತ ನಿರ್ಣಾಯಕ ಎಂದು ಹೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪೊಲೀಸರು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪಕ್ಷದ 1,500 ಸದಸ್ಯರ ಮೇಲೆ ಲಾಹೋರ್ನಲ್ಲಿರುವ ಉನ್ನತ ಸೇನಾ ಅಧಿಕಾರಿಯ ಮನೆಯ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ ಎಂಬ ಆರೋಪ ಕೇಳಿ ಬಂದಿದೆ.