ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ (Congress Manifesto) ಬಜರಂಗದಳ ಸಂಘಟನೆಯನ್ನು (Bajrang Dal) ನಿಷೇಧ ಮಾಡುವುದಾಗಿ ಭರವಸೆ ಕೊಟ್ಟಿರುವುದೇ, ಬಿಜೆಪಿ ಗೆ ಮತ್ತಷ್ಟು ಬಲ ಬರಲು ಕಾರಣ ಆಗಿದೆ ಎಂಬ ವಿಚಾರ ಇದೀಗ ಗೊಂದಲ ಸೃಷ್ಟಿ ಮಾಡಿದೆ. ಮುಸ್ಲಿಂ ಮತಗಳನ್ನೇ ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಜೊತೆ ಬಜರಂಗದಳ ಸಂಘಟನೆಯನ್ನು ಹೋಲಿಸಿ ನಿಷೇಧಿಸಲು ಮುಂದಾಗಿದೆ. ಆ ಪರಿಣಾಮ ಮುಸ್ಲಿಂ ಮತಗಳನ್ನು ಕಸಿದುಕೊಳ್ಳಲು ಬಜರಂಗದಳ ನಿಷೇಧ ವಿಷಯವನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮುಳ್ಳಾಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಇನ್ನು ಬಜರಂಗದಳ ಸಂಘಟನೆಯನ್ನು (Bajrang Dal) ನಿಷೇಧದ ಆಶ್ವಾಸನೆಯ ಬೆನ್ನಲ್ಲೇ ಕರ್ನಾಟಕದಲ್ಲಿ ಬಿಜೆಪಿ (BJP) ಮತ್ತು ಹಿಂದೂಪರ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತ ಪಡಿಸಿದ್ದಲ್ಲದೆ, ರಾಜ್ಯದೆಲ್ಲೆಡೆ ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಹಾಕುವ ಮೂಲಕ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಹನುಮಾನ್ ಚಾಲಿಸ್ ಪಠಣದಂತಹ ಕಾರ್ಯಕ್ರಮ ಆಯೋಜಿಸಿ ಕಾಂಗ್ರೆಸ್ ನಡೆಯನ್ನು ಹಿಂದೂಪರ ಕಾರ್ಯಕರ್ತರು ವಿರೋಧಿಸುತ್ತಿದ್ದಾರೆ. ಅಲ್ಲದೆ ಇದೇ ಕಾರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸೋಲಿಸಲು ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಅಖಾಡದಲ್ಲಿ ಕಸರತ್ತು ನಡೆಸಿದ್ದು ಇದೆ .
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬೆಂಗಳೂರಿನಲ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿ ಇದರ ಪರಿಣಾಮಗಳ ಬಗ್ಗೆ ಚರ್ಚೆಯನ್ನು ನಡೆಸಿ, ಕಾಂಗ್ರೆಸ್ ಬಜರಂಗದಳ ವಿಷಯವನ್ನೇ ಮುಂದಿಟ್ಟುಕೊಂಡು ಸರ್ವೇ ಮಾಡಿಸಿದ್ದು, ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಈ ಕುರಿತ ವರದಿ ತರಿಸಿಕೊಂಡಿದ್ದು, ಸಮೀಕ್ಷೆ ಕುರಿತು ನಿರಾಳವಾಗಿದೆ. ಸಮೀಕ್ಷೆಯ ಪ್ರಕಾರ, ಕರ್ನಾಟಕದ ಮತದಾರರಲ್ಲಿ 7 ಪ್ರತಿ ಶತದಷ್ಟು ಜನರಿಗೆ ಮಾತ್ರ ಈ ಸಮಸ್ಯೆ ಏನು ಎಂದು ತಿಳಿದಿದೆ. ಇದರಲ್ಲಿ ಶೇ 10 ರಷ್ಟು ಕಡಿಮೆ ಜನರು ಇದನ್ನು ಚುನಾವಣಾ ವಿಷಯವೆಂದೇ ಪರಿಗಣಿಸಿದ್ದಾರೆ.
ವಿಶೇಷ ಎಂದರೆ, ಬಿಜೆಪಿ ವೋಟರ್ಸ್ ಜಾಸ್ತಿ ಇರುವ ಪ್ರದೇಶದಲ್ಲಿ ಮಾತ್ರ ಬಜರಂಗದಳ ನಿಷೇಧಕ್ಕೆ ಪ್ರತಿರೋಧ ವ್ಯಕ್ತವಾಗಿದೆ. ಹಿಂದುತ್ವವೇ ತಮ್ಮ ಜೀವಾಳ ವಾಗಿರುವ ಕರಾವಳಿ ಭಾಗದಲ್ಲಿ ದೊಡ್ಡ ಪರಿಣಾಮ ಬೀರಲಿದೆ. ಈ ಬಜರಂಗದಳ ಸಂಘಟನೆಯನ್ನು (Bajrang Dal) ನಿಷೇಧ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಕಡೆ ಮರಳಿದ್ದ ಮತದಾರರು ಬಿಜೆಪಿಯತ್ತ ಮತ್ತೆ ವಾಲಿದ್ದಾರೆ. ಈ ಕಾರಣದಿಂದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಇಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ಸೂಚಿಸಲಾಗಿದೆ . ಒಟ್ಟಿನಲ್ಲಿ ಕರಾವಳಿ ಭಾಗದ 4 ಕ್ಷೇತ್ರಗಳಲ್ಲಿ 1000 – 1500 ಮತಗಳು ಕಾಂಗ್ರೆಸ್ಗೆ ನಷ್ಟವಾಗಬಹುದು ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಇನ್ನು ಉಳಿದ ಕ್ಷೇತ್ರಗಳಲ್ಲಿ ಇದರ ಎಫೆಕ್ಟ್ ಬೀರಿಲ್ಲ ಎಂಬುದು ವರದಿಯಲ್ಲಿ ಹೇಳಲಾಗಿದೆ. ಇದರಿಂದ ಆತಂಕಕ್ಕೆ ಸಿಲುಕಿದ್ದ ಕಾಂಗ್ರೆಸ್ ನಿಟ್ಟುಸಿರುಬಿಟ್ಟಿದೆ.