2023 ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ರಾಜೀವ್ ಗೌಡ ಹೀನಾಯವಾಗಿ ಸೋಲು ಅನುಭವಿಸಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯರ್ತರ ಸಭೆಯನ್ನ ಶಿಡ್ಲಘಟ್ಟ ನಗರದ ಕಾಂಗ್ರೇಸ್ ಭವನದಲ್ಲಿ ಏರ್ಪಡಿಸಲಾಗಿತ್ತು. ಪರಾಜಿತ ಅಭ್ಯರ್ಥಿ ರಾಜೀವ್ ಗೌಡ ಮತ್ತು ಮಾಜಿ ಶಾಸಕ ವಿ ಮುನಿಯಪ್ಪ ಅನುಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ಈ ಬಾರಿ ಮೂರನೇ ಸ್ಥಾನಕ್ಕೆ ಹೋಗಿದ್ದು, ಕಾರ್ಯಕರ್ತರ ಹಾಗೂ ಮುಖಂಡರ ಸಭೆಯನ್ನ ಕರೆದು ಸೋಲಿಗೆ ಕಾರಣ ಏನೆಂದು ಅಭಿಪ್ರಾಯ ಸಂಗ್ರಹ, ಸೋಲಿನ ಪರಾಮರ್ಶೆ ಚರ್ಚೆಯ ಮಾಡುವ ಸಂದರ್ಭದಲ್ಲಿ ಪರಾಜಿತ ಅಭ್ಯರ್ಥಿ ರಾಜೀವ್ ಗೌಡ ಬೆಂಬಲಿಗರು ಮತ್ತು ಮೂಲ ಕಾಂಗ್ರೇಸ್ ಕಾರ್ಯಕರ್ತರು,
ಮುಖಂಡರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋದ ಪರುಣಾಮ ಕೈ ಕೈ ಮಿಲಾಯಿಸಿ ಗಲಾಟೆ ಮಾಡಿಕೊಂಡಿರುವ ಪ್ರಸಂಗ ನಡೆದಿದೆ. ಮುನಿಯಪ್ಪ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿಲ್ಲ, ಪಕ್ಷೇತರ ಅಭ್ಯರ್ಥಿ ಪರ ಮತಹಾಕಿದ್ದಾರೆ ಎಂದು ವಾದಿಸಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಕಾಂಗ್ರೇಸ್ ಭದ್ರಕೋಟೆಯಲ್ಲಿ ರಾಜೀವ್ ಗೌಡರಿಂದ ಪಕ್ಷ ಹೀನಾಯವಾಗಿ ಸೋಲುವಂತಾಯಿತು. ರಾಜೀವ್ ಗೌಸ ಬರೀ ಭೋಗಸ್ ಮಾತುಗಳು ಹೇಳಿಕೊಂಡು ಜನರಿಗೆ ಟೋಪಿ ಹಾಕಿದ್ದಾರೆ. ಪಕ್ಷದ ವರ್ಚಸ್ಸು ಸಹ ಹಾಳು ಮಾಡಿದ್ದಾರೆಂದು ಆಕ್ರೋಶವ್ಯಕ್ತಪಡಿಸಿದ್ದಾರೆ.