ಬೆಂಗಳೂರು :- 2024 ರ ಲೋಕಸಭಾ ಚುನಾವಣೆ ಅಂಗವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಪರ ತೆಲಂಗಾಣ ಸಿಎಂ ರಾಜಧಾನಿ ಬೆಂಗಳೂರಿನಲ್ಲಿ ಪ್ರಚಾರ ನಡೆಸಿದ್ದಾರೆ.
ಪ್ರಚಾರಕ್ಕೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆಗಮಿಸಿ ಸೌಮ್ಯರೆಡ್ಡಿ ಪರ ಮತಯಾಚನೆ ಮಾಡಿದ್ದಾರೆ. ತೆಲುಗು ಭಾಷಿಕರು ಮತ್ತು ರೆಡ್ಡಿ ಮತ ಸೆಳೆಯಲು ರೇವಂತ್ ರೆಡ್ಡಿ ಅಖಾಡಕ್ಕೆ ಇಳಿದಿದ್ದು, ಹೊಂಗಸಂದ್ರ ವಾರ್ಡ್ ವ್ಯಾಪ್ತಿಯಲ್ಲಿ ಹೆಚ್ಚು ತೆಲುಗು ಭಾಷಿಕರು ವಾಸ ಹಿನ್ನೆಲೆ ಹೊಂಗಸಂದ್ರದಲ್ಲಿ ಸೌಮ್ಯರೆಡ್ಡಿ ಪರ ಮತಯಾಚನೆ ಮಾಡಿದ್ದಾರೆ. ರೇವಂತ್ ರೆಡ್ಡಿಗೆ ಸಚಿವ ರಾಮಲಿಂಗಾರೆಡ್ಡಿ, ಅಭ್ಯರ್ಥಿ ಸೌಮ್ಯರೆಡ್ಡಿ, ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್, ಕಾಂಗ್ರೆಸ್ ಮುಖಂಡ ಉಮಾಪತಿ ಶ್ರೀನಿವಾಸ್ ಗೌಡ ಸಾಥ್ ಕೊಟ್ಟಿದ್ದಾರೆ.
ಬಳಿಕ ರೇವಂತ್ ರೆಡ್ಡಿ ಮಾತನಾಡಿ, ಬೆಂಗಳೂರು ದಕ್ಷಿಣದಲ್ಲಿ ಸೌಮ್ಯರೆಡ್ಡಿ ಗೆಲ್ಲಿಸಲು ಕಾಂಗ್ರೆಸ್ ಹೈಕಮಾಂಡ್ ಕಳುಹಿಸಿದೆ. ನನಗೆ ಗೊತ್ತಿಲ್ಲ ಇಷ್ಟೊಂದು ತೆಲುಗು ಭಾಷಿಕರು ಇದ್ದಾರೆ ಎಂದು. ಆಂದ್ರಪ್ರದೇಶದದಿಂದ ಬಂದು ಇಲ್ಲಿ ಜೀವನ ನಡೆಸುತ್ತಿರುವ ನಿಮಗೆ ಅಭಿನಂದನೆ. ಬೆಂಗಳೂರು ಮಹಾನಗರದಲ್ಲಿ ನೀವು ಲಕ್ಷಾಂತರ ಮಂದಿ ನೆಮ್ಮದಿಯಾಗಿ ಜೀವಿಸಲು ರಾಜೀವ್ ಗಾಂಧಿ ಮಾಡಿದ ಕಂಪ್ಯೂಟರ್ ಕ್ರಾಂತಿ ಕಾರಣ. ಹಾಗಾಗಿ ಆಂದ್ರಪ್ರದೇಶದಿಂದ ಬಂದು ಉದ್ಯೋಗ ಮಾಡುತ್ತಿದ್ದೀರಾ. ನನ್ನನ್ನ ಜೈಲಿಗೆ ಕಳುಹಿಸಿದ್ರು ಆದ್ರೆ ತೆಲಂಗಾಣ ಜನ ನನ್ನ ಸಿಎಂ ಮಾಡಿದ್ರು. ಕರ್ನಾಟಕದಲ್ಲಿ ಕೂಡ ಡಿಕೆಶಿಯನ್ನ ಜೈಲಿಗೆ ಕಳುಹಿಸಿದ್ರು. ಕರ್ನಾಟಕ ಜನರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ರು. ಲೋಕಸಭಾ ಚುನಾವಣೆಯಲ್ಲಿ ನಾನೂರು ಸೀಟ್ ಗೆಲುತ್ತೇನೆ ಅಂತ ಮೋದಿ ಹೇಳ್ತಾರೆ. ಆದ್ರೆ ಕರ್ನಾಟಕದಲ್ಲಿ ದೇವೇಗೌಡ, ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು, ಮಹಾರಾಷ್ಟ್ರದಲ್ಲಿ ಅಜಿತ್ ಪವರ್ ಕಾಲು ಹಿಡಿಯೋದು ಯಾಕೆ!? ಎಂದು ಪ್ರಶ್ನಿಸಿದರು. ಕರ್ನಾಟಕ ಮತ್ತು ತೆಲಂಗಾಣದಲ್ಲಿ 70 ಮಂದಿ ಗೆಲ್ಲಿಸಿ ಕಳಿಸಿದ್ರೆ, ಕೇವಲ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದೆ. ಗುಜರಾತ್ ನಲ್ಲಿ ಏಳು, ಉತ್ತರಪ್ರದೇಶಕ್ಕೆ ಹನ್ನೆರಡು ಮಂತ್ರಿಗಳನ್ನ ನೀಡಿದ್ದಾರೆ. ದಕ್ಷಿಣ ರಾಜ್ಯಗಳ ಸಮಸ್ಯೆ ಬಗ್ಗೆ ತಾತ್ಸರ ಮನೋಭಾವ ಇದೇ. ಕುಟುಂಬ ರಾಜ್ಯಕಾರಣಕ್ಕೆ ಬೆಂಬಲ ನೀಡೋದಿಲ್ಲ ಅಂತಾರೇ. ಆದ್ರೆ ಕರ್ನಾಟಕ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಸಹೋದರ ಶಿವಮೊಗ್ಗ ಅಭ್ಯರ್ಥಿ. ಅಷ್ಟೇ ಯಾಕೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಸಂಬಂಧಿ ಬಿಜೆಪಿ ಶಾಸಕ. ಈವೊಂದು ಕುಟುಂಬ ರಾಜಕಾರಣ ನಿಮಗೆ ಕಣ್ಣು ಕಾಣುತ್ತಿಲ್ವಾ