ಶಾಸಕ ವಿರೂಪಾಕ್ಷಪ್ಪ ಮಾಡ್ಯಾಳ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ಘಟನೆ ಏನಿದೆಯೋ ಅದನ್ನೇ ಹೇಳಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದೆ.
ಲೋಕಾಯುಕ್ತ ತನಿಖೆ ನಡೆಸುತ್ತಿದೆ. ತನಿಖೆಗೆ ಮುಕ್ತ ಅವಕಾಶ ನೀಡಿದ್ದೆವೆ ಸತ್ಯಾಸತ್ಯದೆ ಹೊರಬರಲಿ. ಈ ಬಗ್ಗೆ ಮುಂದಿನ ಕ್ರಮಗಳನ್ನು ಅತ್ಯಂತ ನಿಷ್ಪಕ್ಷಪಾತವಾಗಿ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ವಿರೋಧ ಪಕ್ಷಗಳು ಇದನ್ನು ದೊಡ್ಡದು ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಇಂತಹ ಅದೆಷ್ಟೋ ಪ್ರಕರಣಗಳು ನಡೆದಿವೆ. ಈ ಆಪಾದನೆ ಮಾಡುವ ಮೂಲಕ ಅವರ ಪಾಪ ತೊಳೆಯಲು ಸಾಧ್ಯವಿಲ್ಲ. ಅವರ ಭ್ರಷ್ಟಾಚಾರದ ಪಾಪ ಇನ್ನೂ ಇದೆ. 59ಕೇಸ್ ಗಳನ್ನು ಲೋಕಾಯುಕ್ತಕ್ಕೆ ನೀಡಲಾಗುತ್ತದೆ. ತನಿಖೆಯ ನಂತರ ಸತ್ಯಾಸತ್ಯೆತೆ ಹೊರಬರಲಿದೆ ಎಂದರು.
ಬಾಂಬೆ ಡೇಯ್ಸ್ ಪುಸ್ತಕ ಬಿಡುಗಡೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದ ಅವರು, ಸುಮಲತಾ ಬಿಜೆಪಿ ಸೇರ್ಪಡೆ ವಿಚಾರ ಮಾತನಾಡಿ, ಈ ಬಗ್ಗೆ ಹಲವಾರು ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಈಗ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ ನೋಡೋಣ ಎಂದು ಅವರು ಹೇಳಿದರು. ರಾಷ್ಟ್ರೀಯ ಹೆದ್ದಾರಿ ಕ್ರೆಡಿಟ್ ವಿಚಾರವಾಗಿ ಮಾತನಾಡಿದ ಅವರು, ಇದು ಬಹಳ ಸಿಂಪಲ್, ರಾಷ್ಟ್ರೀಯ ಹೆದ್ದಾರಿ ಮಾಡುವುದು ಕೇಂದ್ರ ಸರ್ಕಾರ.
ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದೆ. ಕಾಮಗಾರಿ ಆರಂಭದ ಬಗ್ಗೆ ಹಣದ ಬಿಡುಗಡೆ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ.
ಇವರು ಪ್ರಸ್ತಾವನೆ ಕಳಿಸಿದ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಸಾವನೆ ಇರುವುದು ಇಪ್ಪತ್ತು ವರ್ಷಗಳಿಂದ ಅದು ಇವತ್ತಿನದಲ್ಲ ಎಂದು ಅವರು ಹೇಳಿದರು. ಸಿದ್ದರಾಮಯ್ಯ ಸಿಎಂ ಆಗುವುದಕ್ಕಿಂತ ಮುಂಚೆಯಿಂದಲೂ ಪ್ರಸ್ತಾವನೆ ಇತ್ತು. ನೈಸ್ ರೋಡ್ ಪ್ರಸ್ತಾವನೆ ಫೇಲ್ ಆದಾಗ ಇದು ಮತ್ತೇ ಮುನ್ನೆಲೆಗೆ ಬಂತು. ಇದರ ಇತಿಹಾಸ ಗೊತ್ತಿದ್ದವರಿಗೆ ಗೊತ್ತು. ಎಲ್ಲರೂ ಇತಿಹಾಸ ಮರೆತಿದ್ದಾರೆ ಎಂದು ಕ್ಲೇಮ್ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ವಿ.ಸೋಮಣ್ಣ ಬಿಜೆಪಿ ತೊರೆಯುವ ಬಗ್ಗೆ ಪ್ರತಿಕ್ರಿಯೆ ನೀಡದೇ ಸಿಎಂ ಬಸವರಾಜ ಬೊಮ್ಮಾಯಿಯವರ ಸ್ಥಳದಿಂದ ಕಾಲು ಕಿತ್ತಿದ್ದಾರೆ.