ಬೆಂಗಳೂರು: ಕೇಂದ್ರದಿಂದ ಅನುದಾನ ತಾರತಮ್ಯ ಆರೋಪಿಸಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಜ್ಜಾಗಿದ್ದು ನಾಳೆ ದೆಹಲಿಯ ಜಂತರ್ ಮಂತರ್ʼನಲ್ಲಿ ಪ್ರತಭಟನೆ ನಡೆಸಲು ಮುಂದಾಗಿದೆ.
ಕೇಂದ್ರದ ವಿರುದ್ಧ ರಾಜ್ಯದ ಸಿದ್ದರಾಮಯ್ಯ ಸರ್ಕಾರ ಅನುದಾನ ಸಮರ ಸಾರಿದೆ. ಕೇಂದ್ರಕ್ಕೆ ಬಿಸಿ ಮುಟ್ಟಿಸಲು ದೆಹಲಿ ಚಲೋ ಹಮ್ಮಿಕೊಂಡಿದ್ದು, ನಾಳೆ ನವದೆಹಲಿಯಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿದೆ.
ಈ ಹಿನ್ನೆಲೆಯಲ್ಲಿ ದಿಢೀರನೆ ದೆಹಲಿಗೆ ಭೇಟಿ ಕೊಟ್ಟ ಡಿಸಿಎಂ ಡಿ.ಕೆ.ಶಿವಕುಮಾರ್, ರಾತ್ರೋರಾತ್ರಿ ಪ್ರತಿಭಟನೆ ನಡೆಸಲಿರುವ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು. ಪ್ರತಿಭಟನೆಗೆ ವೇದಿಕೆ ಹಾಕುವ ಬಗ್ಗೆ ಸಲಹೆ ಸೂಚನೆ ಕೊಟ್ರು.. ಈ ವೇಳೆ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಡಿ.ಕೆ.ಶಿವಕುಮಾರ್ಗೆ ಸಾಥ್ ನೀಡಿದ್ರು.
ನಾವು ಕಟ್ಟುವ ತೆರಿಗೆಯಲ್ಲಿ ಅರ್ಧ ಕೊಡಿ ಸಾಕು ಎಂದು ಆಗ್ರಹಿಸಿದ ಡಿಕೆಶಿ, ಪ್ರಧಾನಿ ಭೇಟಿಗೆ ಸಮಯ ಕೇಳಿದ್ದೇವೆ ಎಂದು ಹೇಳಿದ್ರು. ರಾಜ್ಯದ ಎಲ್ಲ ಸಂಸದ, ಶಾಸಕರಿಗೂ ಪ್ರತಿಭಟನೆಗೆ ಭಾಗಿಯಾಗುವಂತೆ ಮನವಿ ಮಾಡಿದ್ದೇವೆ. ನರ್ಮತೆಯಿಂದ ತಲೆಬಾಗಿ ಕೇಳಿಕೊಳ್ಳುತ್ತೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.