ಬೆಳಗಾವಿ: ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಹಿಂದೆ ಮುಂದೆ ವಿಚಾರ ಮಾಡದೇ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿದರು. ಅಧಿಕಾರ ಹಿಡಿತದ ನಂತರ ಕರ್ನಾಟಕದ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ ಎಂದು ಬೆಳಗಾವಿಯಲ್ಲಿ ಆಮ್ ಆದ್ಮಿ ಪಕ್ಷದ ಜಂಟಿ ಕಾರ್ಯದರ್ಶಿ ರಾಜೀವ್ ಟೋಪಣ್ಣವರ್ ಹೇಳಿದರು. ಆಮ್ ಆದ್ಮಿ ಪಕ್ಷ ಸರ್ಕಾರ ದೆಹಲಿಯಲ್ಲಿ ಸತತ 10 ವರ್ಷಗಳಿಂದ 200 ಯೂನಿಟ್ ಫ್ರೀ ಕೊಡುತ್ತಿದೆ.
ಪಂಜಾಬ್ನಲ್ಲಿ 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. 200 ಯೂನಿಟ್ಗಿಂತ ಒಂದೇ ಯೂನಿಟ್ ಜಾಸ್ತಿ ಆದರೂ ಪೂರ್ತಿ ಬಿಲ್ ಕಟ್ಟಬೇಕಾದ ವ್ಯವಸ್ಥೆ ಇದೆ. ದೆಹಲಿಯಲ್ಲಿ ಪವರ್ ಪ್ಲಾಂಟ್ಸ್ ಇಲ್ಲ, ಹೊರಗಿಂದ ವಿದ್ಯುತ್ ಖರೀದಿಸಿ ಪೂರೈಕೆ ಮಾಡಲಾಗುತ್ತದೆ. ಆದರೆ ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತದೆ, ದೇಶದಲ್ಲೇ ಎರಡನೇ ಸ್ಥಾನ ಇದೆ.
ದೆಹಲಿ ಮಾದರಿಯಲ್ಲಿ ಉಚಿತ ವಿದ್ಯುತ್ ನೀಡಿದರೆ ಯೋಜನೆ ಸಫಲವಾಗುತ್ತದೆ. ಈ ಯೋಜನೆ ಜಾರಿ ಮಾಡುವಲ್ಲಿ ಕಾಂಗ್ರೆಸ್ ಫೇಲ್ಯೂರ್ ಆಗುತ್ತಿದೆ. ಸರಾಸರಿ ನೋಡುತ್ತೇವೆ ಅಂತೆಲ್ಲಾ ಮಾತನಾಡುವುದನ್ನ ಬಂದ್ ಮಾಡಬೇಕು ಎಂದರು.