ರಾಮನಗರ: ಹನುಮಂತ ಸುಮ್ಮನೇ ಕುತ್ತಿದ್ದ. ಅವನ ಬಾಲಕ್ಕೆ ಬೆಂಕಿ ಇಟ್ಟಿದ್ದಾರೆ. ಹನುಮಂತನನ್ನು ಕಟ್ಟಿಹಾಕಲು ಸಾಧ್ಯವೇ. ಇಡೀ ಕಾಂಗ್ರೆಸ್ ಅನ್ನು ಸುಟ್ಟು ಹಾಕುತ್ತಾನೆ ಎಂದು ಸಚಿವ ಆರ್ ಅಶೋಕ್ ವಾಗ್ದಾಳಿ ಮಾಡಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರದಲ್ಲಿ ಮಾತನಾಡಿದ ಅವರು, ಇಡೀ ಪ್ರಪಂಚದಲ್ಲಿ ಬಜರಂಗದಳ ಇದೆ. ಲವ್ ಜಿಹಾದ್ ವಿರುದ್ಧ ಹೋರಾಟ ಮಾಡಲು ಬಜರಂಗದಳ ಇದೆ. ದೇಶ ಪ್ರೇಮಿಗಳು ಬಜರಂಗದಳದವರು. ಕಾಂಗ್ರೆಸ್ನವರು ಇದ್ದಾಗ 60 ಕೇಸ್ಗಳು ಬಿದ್ದಿದ್ದವು. ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ಒಂದು ಕೇಸ್ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ನವರು ತಿಂದು ಲೂಟಿ ಮಾಡಿ ಇದೀಗ ಮಾತನಾಡುತ್ತಿದ್ದಾರೆ. ನೀವೇನೂ ಸತ್ಯಹರಿಶ್ಚ್ಂದ್ರನ ಮಕ್ಕಳಾ ಎಂದು ಕಿಡಿಕಾರಿದ್ದಾರೆ. ಮನೆಯ ಮುಂದೆಯೇ ಸತ್ಯಹರಿಶ್ಚಂದ್ರನ ರೀತಿ ಮಾತನಾಡುತ್ತಾರೆ. ರಾಹುಲ್ ಗಾಂಧಿ ಬೇಲ್ ಮೇಲೆ ಇದ್ದಾರೆ. ಬೇಲ್ಗಾಗಿ ಓಡಾಡುತ್ತಿದ್ದಾರೆ. ಮೋದಿ ಪ್ರಪಂಚದ ಸಾಲಿನಲ್ಲಿ ದೇಶವನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ತಿಳಿಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಡೈಲಾಗ್ ಹೊಡೆಯುತ್ತಾರೆ. ಕಾಂಗ್ರೆಸ್ ಪಕ್ಷವನ್ನು ಧಿಕ್ಕಾರ ಮಾಡಿ. ಮೋದಿ ಅವರಿಗೆ ವಿರೋಧಿಗಳು ಇಲ್ಲ. ಅವರೇ ಮತ್ತೆ ಪ್ರಧಾನಿ ಆಗೋದು ಎಂದರು.
ಕನಕಪುರ ಇತಿಹಾಸದಲ್ಲಿ ಬಿಜೆಪಿ ಇಂತಹ ರೋಡ್ ಶೋ ಮಾಡಿಲ್ಲ. ಕಾಂಗ್ರೆಸ್ ದೇಶದಲ್ಲಿ ಎಲ್ಲಿಯೂ ಇಲ್ಲ. ರಾಜಸ್ಥಾನ ಸರ್ಕಾರ ಕೂಡ ಮೂರು ತಿಂಗಳಲ್ಲಿ ಹೊರಟು ಹೋಗುತ್ತದೆ. ಕಾಂಗ್ರೆಸ್ ಹವಾ ಮೋದಿ ಬಂದ ನಂತರ ನಿರ್ನಾಮ ಆಗುತ್ತದೆ. ರಾಹುಲ್ ಗಾಂಧಿ ಎಲ್ಲೆಲ್ಲಿ ಬಂದಿದ್ದಾರೆ ಅಲ್ಲಿ ಸೋಲು ಆಗಿದೆ ಎಂದು ಹರಿಹಾಯ್ದರು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಮನಗರ ಜಿಲ್ಲೆಯ ಕನಕಪುರ ಕ್ಷೇತ್ರದಲ್ಲಿ ಕಮಲ ಅರಳಲಿದೆ. ಇಡೀ ರಾಜ್ಯದಲ್ಲಿ ಮತ್ತು ಕನಕಪುರದಲ್ಲೂ ಬಿಜೆಪಿ ಪರ ಅಲೆ ಇದೆ. ಡಬಲ್ ಇಂಜಿನ್ ಸರ್ಕಾರ ದೊಡ್ಡಮಟ್ಟದ ಅಭಿವೃದ್ಧಿ ಮಾಡಿದೆ. ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತರಿಗೆ ಪರಿಹಾರ ಕೊಟ್ಟಿದ್ದೇವೆ. ಕಂದಾಯ ಇಲಾಖೆಯಲ್ಲಿ ಬಿಜೆಪಿ ಸರ್ಕಾರ ಕ್ರಾಂತಿ ಮಾಡಿದೆ. ಕಾಂಗ್ರೆಸ್ನವರು ಗ್ಯಾರಂಟಿ ಎಂಬ ಹೆಸರಿನಲ್ಲಿ ವೋಟ್ ಕೇಳ್ತಿದ್ದಾರೆ. ಮಾರಾಟವಾಗದ ವಸ್ತುವಿಗೆ ಗ್ಯಾರಂಟಿ ಇರಲ್ಲ, ಕಾಂಗ್ರೆಸ್ ಅದೇ ರೀತಿ ಎಂದು ಕಿಡಿಕಾರಿದರು.
. ಮೇ 10ರ ಬಳಿಕ ಕಾಂಗ್ರೆಸ್ನದ್ದು ಗಳಗಂಟೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜ ಒಡೆಯುತ್ತೆ. ಕಳೆದ ಬಾರಿ ವೀರಶೈವ ಲಿಂಗಾಯತ ಒಡೆಯಲು ಹೋಗಿದ್ದರು. ಚುನಾವಣೆ ಬಂದಿದೆ ಎಂದು ಲಿಂಗಾಯತರ ಮೇಲೆ ಪ್ರೀತಿ ಬಂದಿದೆ ಎಂದು ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಿಎಂ ಟಾಂಗ್ ನೀಡಿದರು.