ಬೆಂಗಳೂರು: ಸರ್ಕಾರದ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ಮಂಗನಕಾಯಿಲೆಗೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್- KFD) ಇಬ್ಬರು ಬಲಿಯಾಗಿದ್ದು, ಮಲೆನಾಡು ಜಿಲ್ಲೆಗಳಲ್ಲಿ ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು “ಚಲೋ ದಿಲ್ಲಿ” ಎಂದು ಬೀದಿ ನಾಟಕ ಮಾಡಲು ಹೊರಟಿದ್ದಾರೆ.ಆದರೆ ಕರ್ನಾಟಕದಲ್ಲಿ… ರೈತರು ಬರ ಪರಿಹಾರ ಎಲ್ಲಿ? ಎನ್ನುತ್ತಿದ್ದಾರೆ. ಅನ್ನದಾತರು ಕಿಸಾನ್ ಸಮ್ಮಾನ್ ನ 4,000 ರೂ ಎಲ್ಲಿ? ಎಂದು ಕೇಳುತ್ತಿದ್ದಾರೆ.
ಹಾಲು ಉತ್ಪಾದಕರು 7 ರೂಪಾಯಿ ಸಹಾಯಧನ ಎಲ್ಲಿ? ಎಂದು ಕೇಳುತ್ತಿದ್ದಾರೆ. ಬಡವರು 10 ಕೆಜಿ ಅಕ್ಕಿ ಎಲ್ಲಿ? ಎಂದು ಕೇಳುತ್ತಿದ್ದಾರೆ. ನಿರುದ್ಯೋಗಿ ಯುವಕರು 3,000 ರೂ. ಎಲ್ಲಿ? ಎಂದು ಕೇಳುತ್ತಿದ್ದಾರೆ.
ನಮ್ಮ ಕ್ಷೇತ್ರಕ್ಕೆ ಅನುದಾನ ಎಲ್ಲಿ? ಎಂದು ಶಾಸಕರು ಕೇಳುತ್ತಿದ್ದಾರೆ. ಕಾಂಗ್ರೆಸ್ ನಾಯಕರೇ, ದಿಲ್ಲಿ ಬಿಡಿ, ಕನ್ನಡಿಗರ ಈ ‘ಎಲ್ಲಿ’ಗಳಿಗೆ ಮೊದಲು ಉತ್ತರ ಕೊಡಿ ಎಂದು ಆರ್. ಅಶೋಕ್ ವಾಗ್ದಾಳಿ ನಡಿಸಿದರು.