ಕಾಂಗ್ರೆಸ್ ಅಧಿಕಾರಕ್ಕೇರಲು ಜನರಿಗೆ ಕೊಟ್ಟಿದ್ದ 5 ಗ್ಯಾರಂಟಿ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿಯೋಜನೆ, ಯುವನಿಧಿ, ಅನ್ನಭಾಗ್ಯ ಯೋಜನೆ. ಹಂತಹಂತವಾಗಿ ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಂಡು ಎಲ್ಲಾ ಗ್ಯಾರಂಟಿಗಳನ್ನ ಕಾರ್ಯರೂಪಕ್ಕೆ ತಂದಿದೆ. ಇದೀಗ ಅದೇ ಗ್ಯಾರಂಟಿ ಅಸ್ತ್ರವನ್ನೇ ಲೋಕಸಭಾ ಚುನಾವಣೆಯಲ್ಲೂ ಪ್ರಯೋಗಿಸಲು ಮುಂದಾಗಿದೆ.
ಕಾಂಗ್ರೆಸ್ ಸರ್ಕಾರದಿಂದ ‘ಗ್ಯಾರಂಟಿ’ ಬಗ್ಗೆ ಮೆಗಾ ಸರ್ವೇ!
ಗ್ಯಾರಂಟಿ ಮೂಲಕ ಗದ್ದುಗೆ ಏರಿದ್ದ ಕಾಂಗ್ರೆಸ್ ಈಗ ಲೋಕಸಭಾ ಚುನಾವಣೆ ಸನಿಹದಲ್ಲಿ ಮತ್ತದೇ ಗ್ಯಾರಂಟಿಗಳು ಸದ್ದು ಮಾಡ್ತೀವೆ. ಆದರೆ ಈ ಸಲ ರಿಯಾಲಿಟಿ ಚೆಕ್ ಮೂಲಕ ಗ್ಯಾರಂಟಿಗಳ ಸರ್ವೇ ಮಾಡಲು ಸರ್ಕಾರ ಮುಂದಾಗಿದೆ. ಮನೆ ಮನೆಗೆ ತೆರಳಿ ಪಂಚ ಗ್ಯಾರಂಟಿಗಳ ಮೂಲಕ ಮತ್ತೆ ಜನರ ಮನಸ್ಸು ಗೆಲ್ಲಲು ಕೈ ಪಡೆ ತಂತ್ರ ಹೆಣೆದಿದೆ. ರಾಜ್ಯವ್ಯಾಪಿ ಮೆಗಾ ಸಮೀಕ್ಷೆಗೆ ಮುಂದಾಗಿರೋ ರಾಜ್ಯ ಸರ್ಕಾರ, ರಿಯಾಲಿಟಿ ಚೆಕ್ಗಾಗಿ ಬರೋಬ್ಬರಿ 1.2 ಲಕ್ಷ ಸಿಬ್ಬಂದಿಯನ್ನ ನೇಮಕ ಮಾಡಲಾಗಿದೆ.
ರಾಜ್ಯವ್ಯಾಪಿ ಗ್ಯಾರಂಟಿ ಸ್ವಯಂ ಸೇವಕರ ನೇಮಕ ಮಾಡಲಾಗಿದೆ. ಪ್ರತಿ ಮನೆಗೂ ಭೇಟಿ ನೀಡಿ ಗ್ಯಾರಂಟಿ ಬಗ್ಗೆ ಸಲಹೆ ನೀಡಲಾಗುತ್ತೆ. ಅಲ್ಲದೆ, ಗ್ಯಾರಂಟಿ ಯೋಜನೆ ಬಗ್ಗೆ ಜನಾಭಿಪ್ರಾಯ ಹೇಗಿದೆ ಮತ್ತು ಅದರ ಸದ್ಬಳಕೆ ಕುರಿತು ಅಭಿಪ್ರಾಯ ಸಂಗ್ರಹಿಸಲಾಗುತ್ತೆ. ಒಟ್ಟು 10-15 ದಿನಗಳ ಕಾಲ ಸರ್ವೇ ನಡೆಯಲಿದೆ. ಒಬ್ಬರಿಗೆ ತಲಾ 1 ಸಾವಿರ ಪ್ರೋತ್ಸಾಹ ಧನ ನಿಗದಿ ಮಾಡಲಾಗಿದೆ. ಇನ್ನೂ ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದಲ್ಲಿ ಸರ್ವೇ ನಡೆಯಲಿದೆ.