ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರವಿದ್ದಾಗ ಹಲವು ಭಾಗ್ಯಗಳನ್ನ ಜನರಿಗೆ ನೀಡಿದೆ. ಅನ್ನಭಾಗ್ಯ, ಕ್ಷೀರ ಭಾಗ್ಯ, ವಿದ್ಯಾ ಭಾಗ್ಯ, ಇಂದಿರಾ ಕ್ಯಾಂಟೀನ್ನಂತ ಹಲವು ಜನಪರ ಯೋಜನೆಗಳು ನಿಮ್ಮ ಮುಂದಿದೆ. ಎಲ್ಲ ಸತ್ಯವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ, ನೀವೆ ಅವಲೋಕಿಸಿ ಎಂದು ಪ್ರಿಯಾಂಕಾ ಗಾಂಧಿ (Priyanka Gandhi)ಹೇಳಿದರು. ಇಷ್ಟೆಲ್ಲಾ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳನ್ನ ಹೊಂದಿದೆ.
200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಹೆಣ್ಣುಮಕ್ಕಳ ಖಾತೆಗೆ 2 ಸಾವಿರ, ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ ಯುವನಿಧಿ ಕಾರ್ಯಕ್ರಮ, ಡಿಪ್ಲೋಮಾ ಪದವಿಧರದರಿಗೂ 1,500 ರೂ. ನೀಡುವ ಯೋಜನೆ, ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಪ್ರತಿ ಸದಸ್ಯರಿಗೆ 10 ಕೆ.ಜಿ.ಅಕ್ಕಿ ನೀಡುವ ಯೋಜನೆ, ಎರಡೂವರೆ ಲಕ್ಷ ಸರ್ಕಾರಿ ನೌಕರಿಯನ್ನು ಒಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ತುಂಬಲಿದೆ. ನಿಮ್ಮ ಅಗತ್ಯ ವಸ್ತುಗಳನ್ನು ನಿಮ್ಮಮನೆಗೆ ತಲುಪಿಸುವ ಹಲವು ಉದ್ಯೋಗಿಗಳನ್ನ ಯೋಜನೆ ಜಾರಿಗೆ ತರಲಿದ್ದೇವೆ ಎಂದರು.