ಉದ್ಯೋಗದಲ್ಲಿ ಮೀಸಲಾತಿ (Reservation in Job) ನೀಡುವುದನ್ನು ಜವಾಹರಲಾಲ್ ನೆಹರು (Jawaharlal Nehru) ವಿರೋಧಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ
ಕಾಂಗ್ರೆಸ್ಸಿಗೆ ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡುವ ಮನಸ್ಸು ಇರಲಿಲ್ಲ. ಅದರೆ ಬಿಜೆಪಿ ಬೆಂಬಲಿತ ಸರ್ಕಾರ ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಿತು ಎಂದು. ದಿನ ದಲಿತರ ನಾಯಕ ಸೀತಾರಾಮ್ ಕೇಸರಿ ಅವರಿಗೂ ಕಾಂಗ್ರೆಸ್ ಅವಮಾನ ಮಾಡಿತ್ತು ಎಂದು ಕಿಡಿಕಾರಿದರು.
ಯುಪಿಎ ಸರ್ಕಾರದ 10 ವರ್ಷಗಳ ಅಧಿಕಾರದ ಬಗ್ಗೆ ದೇಶ ಆಕ್ರೋಶಗೊಂಡಿದ್ದು ಏಕೆ?. ನಾವು ಹೇಳಿದ್ದಕ್ಕೆ ಜನ ಕೋಪಗೊಂಡಿಲ್ಲ. ಕಾಂಗ್ರೆಸ್ ದೇಶವನ್ನು ಉತ್ತರ-ದಕ್ಷಿಣ ಎಂದು ಇಬ್ಭಾಗ ಮಾಡುತ್ತಿದೆ. ತನ್ನ ಪರಿವಾರದವರಿಗೆ ಭಾರತರತ್ನ ನೀಡಿತ್ತು. ಆದರೆ ಡಾ.ಬಿಆರ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನಿರಾಕರಣೆ ಮಾಡಿತ್ತು. ಈ ಭಾರತದ ಭೂಮಿಯನ್ನು ಶತ್ರುಗಳಿಗೆ ಕಾಂಗ್ರೆಸ್ ನೀಡಿತ್ತು ಎಂದು ಮೋದಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಆದಿವಾಸಿ ಮಹಿಳೆ ರಾಷ್ಟ್ರಪತಿಯಾಗಿರುವುದನ್ನು ಕಾಂಗ್ರೆಸ್ ಸಹಿಸಲಿಲ್ಲ. ಈಗ ಕಾಂಗ್ರೆಸ್ಸಿಗರು ರಾಷ್ಟ್ರಪತಿ ಕುರಿತು ಅಗೌರವದಿಂದ ಮಾತನಾಡುತ್ತಿದ್ದಾರೆ. ಆದಿವಾಸಿ ಮಹಿಳೆ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವ ಸಮಯದಲ್ಲಿ ಅಭ್ಯರ್ಥಿಯನ್ನು ಹಾಕದೇ ಬೆಂಬಲ ವ್ಯಕ್ತಪಡಿಸಬೇಕಿತ್ತು ಎಂದು ಹೇಳಿದರು.