ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೇ 16ರಂದು ಮಂಡಿಸಲಿರುವ ಬಜೆಟ್ನಲ್ಲಿ ರಾಮ ಮತ್ತು ಹನುಮ ಕ್ಷೇತ್ರಗಳ ಅಭಿವೃದ್ಧಿಗೆ ಭಾರಿ ಅನುದಾನ ಕೊಡುವ ತಯಾರಿ ನಡೆಸಿದ್ದು, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ’ ಎಂಬ ಬಿಜೆಪಿ ಮತ್ತು ಪರಿವಾರದ ಸಂಘಟನೆಗಳ ಆಪಾದನೆಗೆ ತಿರುಗೇಟು ಕೊಡಲು ಮುಂದಾಗಿದ್ದಾರೆ
ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ವಿಷಯವನ್ನು ಮುಂದಿಟ್ಟು ಬಿಜೆಪಿ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿತು. ‘ನಾವೂ ರಾಮಭಕ್ತರೇ. ಅಯೋಧ್ಯೆಗೂ ಹೋಗುತ್ತೇವೆ. ಬಿಜೆಪಿ ರಾಜಕೀಯಗೊಳಿಸಿರುವ ರಾಮ ನಮ್ಮ ರಾಮನಲ್ಲ; ಗಾಂಧೀಜಿಯ ನಮ್ಮ ರಾಮ’ ಎಂದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರತಿಪಾದಿಸಿದ್ದರು. ಈ ವಾದವನ್ನು ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದರು.

ಲೋಕಸಭೆ ಚುನಾವಣೆಯನ್ನು ಎದುರುಗೊಳ್ಳುತ್ತಿರುವ ಹೊತ್ತಿನೊಳಗೆ ಸಿದ್ದರಾಮಯ್ಯನವರು ತಮ್ಮ 15ನೇ ಬಜೆಟ್ ಮಂಡಿಸಿ, ತಮ್ಮ ದಾಖಲೆಯನ್ನು ತಾವೇ ಮುರಿಯಲಿದ್ದಾರೆ. ದೇಗುಲಗಳ ಅಭಿವೃದ್ಧಿಗೆ ಅನುದಾನ ನೀಡುವ ಮೂಲಕ ‘ಹಿಂದೂ ವಿರೋಧಿ’ ಎಂಬ ಅಪಪ್ರಚಾರವನ್ನು ತೊಡೆದುಹಾಕುವತ್ತ ಹೆಜ್ಜೆ ಇಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.
₹ 100 ಕೋಟಿ: ರಾಜ್ಯದಲ್ಲಿರುವ ರಾಮನ ಹೆಸರಿನ ರಾಮಮಂದಿರಗಳನ್ನು ಗುರುತಿಸಿ, ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆ ಆಧರಿಸಿ, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
ಒಂದು ರಾಮಮಂದಿರಕ್ಕೆ ತಲಾ ₹1 ಕೋಟಿ ನೀಡಿ ಪುರಾತನ ದೇವಾಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಹಣಕಾಸು ಖಾತೆಯನ್ನೂ ಹೊಂದಿರುವ ಸಿದ್ದರಾಮಯ್ಯ ಅವರು, ಬಜೆಟ್ ಪೂರ್ವಭಾವಿ ಸಮಾಲೋಚನೆಯನ್ನು ಇಲಾಖಾವಾರು ನಡೆಸುತ್ತಿದ್ದಾರೆ. ಮುಜರಾಯಿ ಇಲಾಖೆಗೆ ಸಂಬಂಧಿಸಿ ನಡೆದ ಸಭೆಯಲ್ಲಿ ಈ ಪ್ರಸ್ತಾವವನ್ನು ಮುಖ್ಯಮಂತ್ರಿ ಮುಂದೆ ಮಂಡಿಸಲಾಗಿದೆ.