ಚುನಾವಣೆ ಗೆಲ್ಲೋಕೆ ಮೂರೂ ಪಕ್ಷಗಳಲ್ಲಿ ಏನೇನೋ ಸ್ಟ್ರಾಟಜಿ ನಡೀತಾ ಇದೆ. ಕಾಂಗ್ರೆಸ್ ನಲ್ಲಿ ಎರಡನೇ ಪಟ್ಟಿ ಬಿಡುಗಡೆ ಆದ್ಮೇಲಂತೂ ಬಂಡಾಯ ಭುಗಿಲೆದ್ದಿದೆ. ಕೆಲವರು ಬೇರೆ ಪಾರ್ಟಿಗಳತ್ತ ಮುಖ ಮಾಡ್ತಿದ್ರೆ, ಇನ್ನೂ ಕೆಲವರು ಪಕ್ಷಕ್ಕೆ ಸೆಡ್ಡು ಹೊಡೆದಿದ್ದಾರೆ.. ತಮ್ಮ ತಮ್ಮ ಸಮುದಾಯ ನಾಯಕರಿಗೆ ಟಿಕೆಟ್ ಕೊಡಿಸಲು, ಸ್ವಾಮೀಜಿಗಳೂ ಕೂಡ ಅಖಾಡಕ್ಕೆ ಇಳಿದು ಬಿಟ್ಟಿದ್ದಾರೆ..
ಯೆಸ್… ಎರಡನೇ ಪಟ್ಟಿ ಬಿಡುಗಡೆ ಆಗ್ತಿದ್ದಂತೆ ಕೈ ಪಡೆಯಲ್ಲಿ ಅಸಮಧಾನ ಸ್ಫೋಟ ಆಗಿದೆ.. ಟಿಕೆಟ್ ಬಯಸಿದ್ದ ಆಕಾಂಕ್ಷಿಗಳೆಲ್ಲಾ ಬಂಡಾಯವೆದ್ದು, ಪಕ್ಷೇತರರಾಗಿ ನಿಲ್ಲೋದಕ್ಕೆ ಸಿದ್ದತೆ ಮಾಡಿಕೊಳ್ತಿದ್ದಾರೆ. ಕೆಲವು ಆಕಾಂಕ್ಷಿಗಳು ಜೆಡಿಎಸ್, ಬಿಜೆಪಿ ನಾಯಕರ ಮನೆ ಬಾಗಿಲು ತಟ್ಟಿದ್ದಾರೆ.. ಕಲಘಟಗಿಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ಸೇರಲು ನಾಗರಾಜ್ ಛಬ್ಬಿ ತೀರ್ಮಾನಿಸಿದ್ದಾರೆ. ಚಿತ್ರದುರ್ಗದಲ್ಲಿ ರಘು ಆಚಾರ್ ಜೆಡಿಎಸ್ ನಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.. ಹಾನಗಲ್ ನಲ್ಲಿಮನೋಹರ್ ತಹಶೀಲ್ದಾರ್ ಕೂಡ ಜೆಡಿಎಸ್ ಕಡೆ ಮುಖ ಮಾಡಿದ್ದಾರೆ. ಚಿತ್ರದುರ್ಗ, ತುಮಕೂರು, ಉಡುಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟಿದ್ದಾರೆ. ಮಂಡ್ಯಾದಲ್ಲಿ ಕೆ. ಕೆ ರಾಧಾಕೃಷ್ಣ ಬಂಡಾಯವೆದ್ದಿದ್ರೆ, ಕಡೂರಿನಲ್ಲಿ ವೈಎಸ್ ವಿ ದತ್ತಾ ತೀವ್ರ ಅಸಮಧಾನಗೊಂಡಿದ್ದಾರೆ. ಏಪ್ರಿಲ್ 9 ರಂದು ಬೆಂಬಲಿಗರ ಸಭೆ ನಡೆಸಿ, ಕಾಂಗ್ರೆಸ್ ಗೆ ತಿರುಗೇಟು ಕೊಡಲು ತೀರ್ಮಾನ ಮಾಡಿದ್ದಾರೆ..
ತೇರದಾಳ ಟಿಕೆಟ್ ಗಾಗಿ ಮಾಜಿ ಸಚಿವೆ ಉಮಾಶ್ರೀ ತೀವ್ರ ಲಾಭಿ ನಡೆಸ್ತಾ ಇದ್ದಾರೆ. ಆದ್ರೆ ಅವ್ರಿಗೆ ಟಿಕೆಟ್ ಕೊಡಬಾರದು ಅಂತಾ ಹಟಗಾರ ಲಿಂಗಾಯತ ಪೀಠದ ಚಿಕ್ಕರೇವಣಸಿದ್ದ ಸ್ವಾಮೀಜಿ ಆಗ್ರಹ ಮಾಡಿದ್ದಾರೆ. ಕೆಲವು ನಾಯಕರು ಉಮಾಶ್ರೀಗೇ ಟಿಕೆಟ್ ಕೊಡಬೇಕು ಅಂತಾ ಆಗ್ರಹ ಮಾಡ್ತಿದ್ದಾರೆ..
ದಾಸರಹಳ್ಳಿ, ಹರಿಹರ, ಅಥವಾ ಮಾಗಡಿ ಟಿಕೆಟ್ ಗೆ ಫೈಟ್ ನಡೆಸ್ತಾ ಇದ್ರು. ದಾಸರಹಳ್ಳಿಯಲ್ಲಿ ಹೆಚ್ ಎಂ ರೇವಣ್ಣ, ಧನಂಜಯ್ ಟಿಕೆಟ್ ನೀಡದಂತೆ ವಿರೋಧ ಮಾಡಿದ್ದಾರೆ. ಸ್ಥಳೀಯ ನಾಯಕ ತೀವ್ರ ವಿರೋಧ ಹಿನ್ನೆಲೆ ಟಿಕೆಟ್ ಮಿಸ್ ಆಗಿದೆ. ಮಾಗಡಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೂ ಹೆಚ್ ಎಂ ರೇವಣ್ಣ ಲಾಬಿ ನಡೆಸಿದ್ರು. ಕಳೆದ ಚುನಾವಣೆಯಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಹೆಚ್ ಸಿ ಬಾಲಕೃಷ್ಣ ಸೋಲು ಕಂಡಿದ್ರು. ಹೀಗಾಗಿ ಮಾಗಡಿ ಟಿಕೆಟ್ ಕೊಡುವಂತೆ ಹೆಚ್ ಎಂ ರೇವಣ್ಣ ಪಟ್ಟು ಹಿಡಿದಿದ್ರು. ಆದ್ರೆ ಅದು ಕೈಗೂಡಲಿಲ್ಲ.. ಈ ಬಗ್ಗೆ ಡಿ.ಕೆ ಶಿವಕುಮಾರ್ ಎದುರಲ್ಲೇ ಹೆಚ್ ಎಂ ರೇವಣ್ಣ ಅಸಮಧಾನ ಹೊರ ಹಾಕಿದ್ರು.
ಎರಡನೇ ಪಟ್ಟಿ ಬಿಡುಗಡೆಯಿಂದ ಎದ್ದಿರೋ ಬಂಡಾಯಕ್ಕೆ ಕಾಂಗ್ರೆಸ್ ನಾಯಲಕರು ಬೆದರಿ ಹೋಗಿದ್ದಾರೆ. ಏಪ್ರಿಲ್ 9 ನೇ ತಾರೀಖು ಕೋಲಾರದಲ್ಲಿ ನಡೆಯಬೇಕಿದ್ದ ಸಮಾವೇಶವನ್ನ ಮುಂದೂಡಿದ್ದಾರೆ. ಏಪ್ರಿಲ್ 16 ಭಾನುವಾರದಂದು ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ.. ಸತ್ಯಮೇವ ಜಯತೆ ಬದಲು ಜೈ ಭಾರತ್ ಹೆಸರಿನಲ್ಲಿ ಸಮಾವೇಶಕ್ಕೆ ಪ್ಲ್ಯಾನ್ ಮಾಡಿದ್ದಾರೆ..
ಇನ್ನು ವರುಣಾ, ಶಿಕಾರಿಪುರದಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂಬ ಮಾತುಗಳು ಜೋರಾಗಿವೆ. ಹೆಚ್ ಡಿ ಕುಮಾರಸ್ವಾಮಿ ಹಾಕಿದ್ದ ಬಾಂಬ್ ನಿಜಾನಾ..? ಅನ್ನೋ ಅನುಮಾನ ಕಾಡ್ತಾ ಇದೆ. ಶಿಕಾರಿಪುರದಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಬೇಕೆಂದು ಕೈ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಆದ್ರೆ ಕೈ ಅಭ್ಯರ್ಥಿ ಬಗ್ಗೆ ಸಿದ್ದರಾಮಯ್ಯ ತಲೆಯೇ ಕೆಡಿಸಿಕೊಳ್ಳುತ್ತಿಲ್ಲ. ವರುಣಾ ಕ್ಷೇತ್ರದಿಂದ ಬಿ. ವೈ ವಿಜಯೇಂದ್ರ ಸ್ಪರ್ಧೆಗೆ ಒತ್ತಾಯ ಕೇಳಿ ಬರ್ತಿದೆ. ಆದ್ರೆ ಶಿಕಾರಿಪುರದಲ್ಲೇ ವಿಜಯೇಂದ್ರ ಸ್ಪರ್ಧೆ ಅಂತಾ ಬಿಎಸ್ ವೈ ಘೋಷಣೆ ಮಾಡಿದ್ದಾರೆ. ಸಚಿವ ವಿ. ಸೋಮಣ್ಣ, ಸಿದ್ದರಾಮಯ್ಯ ನಡುವೆ ಉತ್ತಮ ಬಾಂದವ್ಯ ಇದೆ. ಹೀಗಾಗಿ ವರುಣಾದಿಂದ ಕಣಕ್ಕಿಳಿಯಲು ವಿ ಸೋಮಣ್ಣ ಹಿಂದೇಟು ಹಾಕಿದ್ದಾರೆ. ಈ ನಡುವೆ ವರುಣಾ ಟಿಕೆಟ್ ಗೆ ದೇವನೂರು ಪ್ರತಾಪ್, ಕಾಪು ಸಿದ್ದಲಿಂಗಸ್ವಾಮಿ, ಸದಾನಂದ ಹೆಸರು ಶಿಫಾರಸು ಮಾಡಲಾಗಿದೆ. ಸಿದ್ದು – ಬಿಎಸ್ ವೈ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ ಅಂತಾ ಕಾಂಗ್ರೆಸ್, ಬಿಜೆಪಿ ಪಡಸಾಲೆಯಲ್ಲಿ ಗುಲ್ಲೆಬ್ಬಿದೆ..
ಸದ್ಯ 166 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನ ಘೋಷಣೆ ಮಾಡಲಾಗಿದೆ. ಬಾಕಿ 58 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟಾಗೇ ಉಳಿದಿದೆ. ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಏಪ್ರಿಲ್ 16 ರ ಸಮಾವೇಶದಲ್ಲೇ ಕ್ಲಾರಿಟಿ ಸಿಗಲಿದೆ. ಹಾಲಿ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ, ರಾಮಪ್ಪಗೆ ಟಿಕೆಟ್ ಕನ್ಫರ್ಮ್ ಅಂತಾ ಹೇಳಲಾಗ್ತಿದೆ. ಇದೇನೇ ಇದ್ರೂ ಬಂಡಾಯ ಎದ್ದಿರೋ ನಾಯಕರನ್ನ ಸಮಾಧಾನ ಮಾಡೋಕೆ ಕಾಂಗ್ರೆಸ್ ನಾಯಕರು ತಿಪ್ಪರಲಾಗ ಹೊಡೆಯುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತ್ರ ಮೂರನೇ ಪಟ್ಟಿ ಬಿಡುಗಡೆ ಮಾಡೋಕೆ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.