ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಬ್ರೆಂಡನ್ ಮೆಕ್ಕಲಂ ’22 ಬೆಟ್’ ಹೆಸರಿನ ಆನ್ಲೈನ್ ಬೆಟ್ಟಿಂಗ್ ಆ್ಯಪ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ) ತನಿಖೆ ಆರಂಭಿಸಿದೆ. ಮೆಕ್ಕಲಂಗೆ ಬೆಟ್ಟಿಂಗ್ ಸಂಸ್ಥೆ ಜೊತೆಗಿನ ಸಂಬಂಧ ಹಾಗೂ ಮಂಡಳಿಯ ಭ್ರಷ್ಟಾಚಾರ ವಿರೋಧಿ ನಿಯಮವನ್ನು ಮೆಕ್ಕಲಂ ಉಲ್ಲಂಘಿಸಿದ್ದಾರೆಯೇ ಎಂದು ಇಸಿಬಿ ಪರಿಶೀಲನೆ ನಡೆಸುತ್ತಿದೆ.
ಇನ್ನು ಇದೆಲ್ಲದರ ನಡುವೆಯೇ, ಬ್ರೆಂಡನ್ ಮೆಕ್ಕಲಂ ಅವರ ವಿರುದ್ದ ಯಾವುದೇ ತನಿಖೆ ನಡೆಸುತ್ತಿಲ್ಲ ಎಂದು ಇಸಿಬಿ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ. ನ್ಯೂಜಿಲೆಂಡ್ ಮಾಜಿ ನಾಯಕ ಜನವರಿಯಲ್ಲಿ 22 ಬೆಟ್ನ ರಾಯಭಾರಿಯಾಗಿ ನೇಮಕಗೊಂಡಿದ್ದರು. ಇತ್ತೀಚೆಗೆ ಐಪಿಎಲ್ಗೆ ಸಂಬಂಧಿಸಿದ ಬೆಟ್ಟಿಂಗ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.
ಬ್ರೂಕ್ ಶತಕಕ್ಕೆ ಬೆಚ್ಚಿದ ನೈಟ್ರೈಡರ್ಸ್!
ಕೋಲ್ಕತಾ: ಕೊನೆ ಕ್ಷಣದಲ್ಲಿ ಬ್ಯಾಟಿಂಗ್ನಲ್ಲಿ ಅಬ್ಬರಿಸಿ ಕಳೆದೆರಡು ಪಂದ್ಯಗಳನ್ನು ತನ್ನದಾಗಿಸಿಕೊಂಡಿದ್ದ ಕೋಲ್ಕತಾ ಈ ಬಾರಿ ಅದೇ ಸಾಹಸ ಪ್ರದರ್ಶಿಸುವಲ್ಲಿ ವಿಫಲವಾಯಿತು. ರಿಂಕು ಸಿಂಗ್ ಹಾಗೂ ನಿತೀಶ್ ರಾಣಾ ಮತ್ತೊಮ್ಮೆ ಸ್ಪೋಟಕ ಆಟವಾಡಿದರೂ ಶುಕ್ರವಾರ ತಂಡಕ್ಕೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 23 ರನ್ಗಳ ಸೋಲಿನಿಂದ ತಪ್ಪಿಸಲು ಆಗಲಿಲ್ಲ. ಎರಡು ಸೋಲಿನೊಂದಿಗೆ ಟೂರ್ನಿಗೆ ಕಾಲಿರಿಸಿದ್ದ ಹೈದರಬಾದ್ ಸತತ 2ನೇ ಜಯ ದಾಖಲಿಸಿದರೆ, ಕೋಲ್ಕತಾದ ಹ್ಯಾಟ್ರಿಕ್ ಗೆಲುವಿನ ಕನಸು ನನಸಾಗಲಿಲ್ಲ.