ಬೆಂಗಳೂರು;– ರಾಜಕೀಯವಾಗಿ ರಾಹುಲ್ ಗಾಂಧಿ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಹುಲ್ ಗಾಂಧಿ ಜನಪ್ರಿಯತೆಯನ್ನು ನೋಡಿ ಷಡ್ಯಂತ್ರ ನಡೆಯುತ್ತಿದೆ. ರಾಹುಲ್ ಪಾದಯಾತ್ರೆ ಮಾಡಿದ ಕ್ಷೇತ್ರಗಳಲ್ಲೆಲ್ಲ ಕಾಂಗ್ರೆಸ್ ಗೆದ್ದಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಬೆಂಬಲಿಸಿ ಬುಧವಾರ ಫ್ರೀಡಂಪಾರ್ಕ್ನಲ್ಲಿ ಮೌನ ಪ್ರತಿಭಟನೆ ಮಾಡಲಿದ್ದೇವೆ. ಸಿಎಂ ಸೇರಿ ಎಲ್ಲಾ ಶಾಸಕರು ಭಾಗಿಯಾಗಲಿದ್ದಾರೆ ಎಂದರು. ಎಲ್ಲ ವಿರೋಧ ಪಕ್ಷದವರು ರಾಹುಲ್ ಪರ ನಿಲ್ಲುತ್ತಿದ್ದೇವೆ ಎನ್ನುವ ಸಂದೇಶ ಕಳಿಸಬೇಕಿದೆ. ರಾಹುಲ್ ಕರ್ನಾಟಕದಲ್ಲಿ ಮಾಡಿದ್ದ ಭಾಷಣಕ್ಕೆ ಕೋರ್ಟ್ ತೀರ್ಪಿನ ಬಗ್ಗೆ ಮಾತಾಡುವುದಿಲ್ಲ.
ಭಾರತ್ ಜೋಡೋ ಯಾತ್ರೆಯಲ್ಲಿ ಅವರು ನಡೆದ ಶಕ್ತಿಯಿಂದಾಗಿ ಕರ್ನಾಟಕಕ್ಕೂ ಶಕ್ತಿ ಬಂತು. ರಾಹುಲ್ ನಡೆದ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಅವರು ಎಲ್ಲೆಲ್ಲಿ ಹೆಜ್ಜೆ ಹಾಕಿದ್ದರೋ ಅಲ್ಲೆಲ್ಲಾ ಗೆದ್ದು ಶಕ್ತಿ ಬಂದಿದೆ ಎಂದು ಹೇಳಿದರು.