ಬೆಂಗಳೂರು: ಪರಿಶ್ರಮ ಹಾಗೂ ಪಕ್ಷ ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ(BJP National General Secretary CT Ravi) ಹೇಳಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಜವಾಬ್ದಾರಿ ಸಿಕ್ಕಮೇಲೆ ಕ್ಷೇತ್ರದ ಕಡೆ ಓಡಾಟ ಕಡಿಮೆ ಆಯ್ತು. ಪರಿಸ್ಥಿತಿಯ ಪಿತೂರಿಯೂ ಆಗಿರಬಹುದು. ನಾನು ಯಾರ ಮೇಲೂ ಬೊಟ್ಟು ಮಾಡುವುದಿಲ್ಲ. ನಿರಂತರವಾಗಿ ಗೆಲ್ಲುವುದೊಂದೇ ನಾಯಕನ ಲಕ್ಷಣ ಅಲ್ಲ. ಹೊಂದಾಣಿಕೆ ಮಾಡಿಕೊಂಡು ರಾಜಕೀಯ ಮಾಡೋಕೆ ನನಗೆ ಬರಲ್ಲ. ಹಾಗೆ ಮಾಡೋದಿದ್ದರೆ ನಾನು ಮಾಡಬಹುದಿತ್ತು. ಸಿದ್ಧಾಂತ, ಪಕ್ಷ ಮುಖ್ಯ.
ವೈಯಕ್ತಿಕ ಹಿತಾಸಕ್ತಿ ಇಲ್ಲ. ನಿರಂತರವಾಗಿ ಗೆದ್ದವರು ಮಾತ್ರವೇ ನಾಯಕರಲ್ಲ. ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಯಾದವರು ಇದ್ದಾರೆ. ಪರಿಶ್ರಮ ಹಾಗೂ ಪಕ್ಷ ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದು ಹೇಳಿದರು. ನಾವು ಕೆಲಸ ಮಾಡಿಲ್ಲ ಅಂತ ಸೋತಿಲ್ಲ. ಸುಳ್ಳು ಸುದ್ದಿ ಹಾಗೂ ಹಣ ಕೊಟ್ಟು ಮಾಡಿಸಿದ ಸುದ್ದಿ ಈ ರೀತಿಯ ಫಲಿತಾಂಶ ಕೊಟ್ಟಿದೆ. ಚುನಾವಣೆಯಲ್ಲಿ ಸೋತಿರಬಹುದು, ಆದರೆ ನಾವು ಸತ್ತಿಲ್ಲ ಎಂದು ಕಾರ್ಯಕರ್ತರು ವಾಟ್ಸ್ಆಯಪ್ ಸಂದೇಶ ಕಳುಹಿಸಿದರು. ಪಕ್ಷ ಸಂಘಟನೆಗಾಗಿ ಸದಾ ಮುಂದಿರುತ್ತೇನೆ.” ಎಂದು ಸಿಟಿ ರವಿ ಹೇಳಿದ್ದಾರೆ.