ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದ ಹಕ್ಕುಪತ್ರಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮುಖಂಡರು ಮಾಡಿದ್ದಾರೆ ಎಂದು ಮಾನ್ಯ ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ತಿಳಿಸಿದರು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್ ನ ಕಂಠೀರವನಗರದಲ್ಲಿ ಮೂರು ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಹಕ್ಕುಪತ್ರಗಳ ನೊಂದಣಿ, ಬಡಾವಣೆಯ ಅಭಿವೃದ್ಧಿ, ಮನೆಗಳನ್ನು ಕಟ್ಟುವುದಕ್ಕೆ ಅಂದಿನ ಸರ್ಕಾರದಲ್ಲಿ ಡಾ.ಅಂಬರೀಶ್ ರವರು ವಸತಿ ಸಚಿವರಾಗಿದ್ದ ಸಂದರ್ಭದಲ್ಲಿ ಇಡೀ ಕ್ಷೇತ್ರಕ್ಕೆ 400 ಮನೆಗಳನ್ನು ತರಲಾಗಿದೆ ಎಂದರು.
ನಾನು ಶಾಸಕನಾದ ಮೇಲೆ 2015 -16 ರಿಂದ ಒಟ್ಟು ಕ್ಷೇತ್ರಕ್ಕೆ 665 ಮನೆಗಳನ್ನು 4 ಮತ್ತು 5 ಲಕ್ಷ ಅನುದಾನದಲ್ಲಿ ನಿರ್ಮಾಣ ಮಾಡಲಿ ಎಂದು ಆದೇಶ ಪ್ರತಿಯನ್ನು ನೀಡಿ ಬಡವರು ಮನೆಯನ್ನು ಕಟ್ಟಿಕೊಳ್ಳಲು ಅನುಕೂಲ ಮಾಡಲಾಗಿದೆ ಎಂದರು.ಕೋವಿಡ್ ಬಂದಂತಹ ಸಂದರ್ಭದಲ್ಲಿ ಜೊತೆಯಲ್ಲಿರುವ ಎಲ್ಲಾ ಮುಖಂಡರುಗಳು ಧೈರ್ಯದಿಂದ ಕೆಲಸವನ್ನು ನಿರ್ವಹಿಸಿದರು ಎಂದರು. ಕಷ್ಟದಲ್ಲಿರುವಂತಹ ಬಡ ಕುಟುಂಬಗಳು, ಕಂಠೀರವನಗರ, ಪರಿಮಳನಗರ ಹಾಗೂ ಕ್ಷೇತ್ರದ ಯಾವುದೇ ಭಾಗಕ್ಕೆ ಸಹಾಯ ಮಾಡಲು ಇತರ ಪಕ್ಷದ ಮುಖಂಡರು ಬಂದಿರಲಿಲ್ಲ. ಹಾಗಾಗಿ ಜನರಿಗೆ ನಾವು ಸಹಾಯ ಮಾಡಿದ್ದೇವೆ ಎಂದರು.
ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದ ಜನರು ಯಾರು ಹಸಿವಿನಿಂದ ಇರಬಾರದು ಎಂಬ ನಿರ್ಧಾರ ಮಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 80 ಕೋಟಿ ಜನರಿಗೆ 22 ತಿಂಗಳು 5 ಕೆಜಿ ಅಕ್ಕಿಯನ್ನು ಕೊಡುವಂತಹ ಕೆಲಸವನ್ನು ಹಾಗೂ ಬಿ.ಎಸ್. ಯಡಿಯೂರಪ್ಪ ನವರು ಮುಖ್ಯಮಂತ್ರಿ ಆಗಿದ್ದಾಗ ಅವಧಿಯಲ್ಲಿ ಒಟ್ಟು 10 ಕೆಜಿ ಅಕ್ಕಿಯನ್ನು ನಮ್ಮ ಡಬಲ್ ಇಂಜಿನ್ ಸರ್ಕಾರ ಮಾಡಿದೆ ಎಂದರು.
ಸಭೆಯಲ್ಲಿ ಮಾಜಿ ಶಾಸಕರಾದ ನೆ.ಲ.ನರೇಂದ್ರಬಾಬು ಮಾಜಿ ಉಪಮೇಯರ್ ಎಸ್ ಹರೀಶ್, ಬಿಬಿಎಂಪಿ ಸದಸ್ಯ ರಾಜೇಂದ್ರ ಕುಮಾರ್, ಶ್ರೀನಿವಾಸ್, ಹನುಮಂತರಾಯಪ್ಪ, ಪ್ರಸನ್ನ, ಬಚ್ಚೇಗೌಡ, ಮಹೇಶ್, ರಂಗಸ್ವಾಮಿ, ವೆಂಕಟೇಶ್ ಮೂರ್ತಿ, ಪ್ರಕಾಶ್, ರವಿ, ಗಣೇಶ, ರಮೇಶ್, ಅಂಬರೀಶ್, ಚಂದ್ರಶೇಖರ್, ಧನಲಕ್ಷ್ಮಿ, ರಮಾ, ಬೈಲಪ್ಪ ಸೇರಿದಂತೆ ಬಿಜೆಪಿಯ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.